ಬೆಂಗಳೂರು: ಬಿಬಿಎಂಪಿಯ ವಾರ್ಡ್ ಸಂಖ್ಯೆ 72ರಲ್ಲಿ ಮಹಿಳಾ ಪೌರಕಾರ್ಮಿಕರ ಮೇಲೆ ನಡೆದ ಹಿಂಸಾಚಾರ ಮತ್ತು ಜಾತಿ ನಿಂದನೆ ಘಟನೆಯನ್ನು ಬಿಬಿಎಂಪಿ ಪೌರಕಾರ್ಮಿಕ ಸಂಘ ತೀವ್ರವಾಗಿ ಖಂಡಿಸಿದೆ ಜೊತೆಗೆ ಬ್ಯಾಡರ್ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲು ಪೌರಕಾರ್ಮಿಕರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದೆಂದು ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅಪ್ಪಣ್ಣ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದ ಕಟ್ಟಕಡೆಯ ಮತ್ತು ತಳ ಸಮುದಾಯಗಳಲ್ಲಿ ಒಂದಾದ ಮಾದಿಗ ಸಮುದಾಯಕ್ಕೆ ಸೇರಿದ ಸಂತ್ರಸ್ತರು ಈ ಘಟನೆಯಿಂದ ತೀವ್ರ ಅಪಮಾನ ಮತ್ತು ಮಾನಸಿಕ ಆಘಾತಕ್ಕೊಳಗಾಗಿದ್ದಾರೆ, ಹೀಗಾಗಿ ಈ ಕೂಡಲೇ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡರು.
ನಂತರ ಮಹಿಳಾ ಪೌರಕಾರ್ಮಿಕರು ಮಾತನಾಡಿ, ಸೆ. 11 ರಂದು ಬೆಳಗ್ಗೆ 11.30ರ ಸುಮಾರಿಗೆ ಭಾರತನಗರದ 14ನೇ ಕ್ರಾಸ್ ನ್ನು 6 ಜನ ಮಹಿಳಾ ಪೌರಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದರು, ಒಂದು ಮನೆಯ ಮುಂದೆ ತಾಯಿ ಮತ್ತು ಆತನ ಮಗ ಚಂದ್ರು ಅವರ ಮನೆಯ ಮುಂದೆ ಇರುವಂತಹ ಕಸವನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದರು, ಕಸ ತೆಗೆದುಕೊಂಡು ಹೋಗಲು ಟಿಪ್ಪರ್ ಆಟೋ ಬರುತ್ತದೆ. ನಮ್ಮ ದು ಕಸ ಗುಡಿಸು ಗುಡಿಸುವ ಕೆಲಸ ಎಂದು ಹೇಳಿದಾಗೆ ತಾಯಿ ಮತ್ತು ಮಗ ಚಂದ್ರು ಮಹಿಳೆಯರಿಗೆ ಅಸಭ್ಯ ಮಾತುಗಳಿಂದ ನಿಂದಿಸಿ ಹಲ್ಲೆ ನಡೆಸಿರುತ್ತಾರೆ. ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುವ ಸಂದರ್ಭದಲ್ಲಿ ಚಂದ್ರು ನಮ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡು ನೆಲಕ್ಕೆ ಕುಕ್ಕಿ ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ ಎಸೆಗಿರುತ್ತಾರೆ. ಬ್ಯಾಡರಹಳ್ಳಿ ಪೊಲೀಸರು ಶೀಘ್ರ ಕ್ರಮ ಕೈಗೊಂಡು ಆರೋಪಿಗಳನ್ನು ತಡಮಾಡದೆ ಬಂಧಿಸಬೇಕು. ಪೌರಕಾರ್ಮಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಅವರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿ ಪಡಿಸುವುದಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ತರಬೇಕೆಂದು ಒತ್ತಾಯಿಸಿದರು. ಪೌರ ಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ, ಲಕ್ಷ್ಮೀ, ರಾಮಕ್ಕ, ಮುನಿಯಮ್ಮ, ನಾಗಲಕ್ಷ್ಮಿ, ರಂಗಮ್ಮ, ರಮಾದೇವಿ ಸಂಪಮ ಸೇರಿದಂತೆ ಇನ್ನಿತರೆ ಮಹಿಳಾ ಪೌರ ಕಾರ್ಮಿಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.