ಚಪ್ಪಲಿ ಹೊರಗಡೆ ಬಿಡಿ ಎಂದಿದ್ದಕ್ಕೆ ಅಪ್ಪ–ಮಗನಿಂದ ದೌರ್ಜನ್ಯ.
ಮೈಸೂರು: ಕ್ಷುಲ್ಲಕ ಕಾರಣಕ್ಕೆ ವೈದ್ಯನ ಮೇಲೆ ಅಪ್ಪ, ಮಗ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ನಡೆದಿದೆ. ಕ್ಲಿನಿಕ್ ಹೊರಭಾಗ ಚಪ್ಪಲಿ ಬಿಟ್ಟು ಬನ್ನಿ ಅಂತಾ ಹೇಳಿದಕ್ಕೆ ಶಿಶು ಆಸ್ಪತ್ರೆಯ ವೈದ್ಯ ಡಾ.ಅನೂಪ್ ಮೇಲೆ ಹಲ್ಲೆ ನಡೆಸಲಾಗಿದೆ. ರುಬಿಯಾಜ್ ಷರೀಫ್, ಆತನ ತಂದೆ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ರುಬಿಯಾಜ್ ಷರೀಫ್ರ 3 ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆಸ್ಪತ್ರೆಗೆ ಆತ ಬಂದಿದ್ದ. ಈ ವೇಳೆ ಚಪ್ಪಲಿ ಧರಿಸಿಯೇ ಒಳಬಂದ ಹಿನ್ನೆಲೆ ಅದನ್ನು ಹೊರಗೆ ಬಿಡುವಂತೆ ವೈದ್ಯ ಅನೂಪ್ ಮನವಿ ಮಾಡಿದ್ದರು. ಚಪ್ಪಲಿ ಹೊರಗೆ ಬಿಡುವುದಿಲ್ಲ ಅಂತಾ ಗಲಾಟೆ ಮಾಡಿ ಹಲ್ಲೆ ನಡೆಸಲಾಗಿದೆ. ವೈದ್ಯ ಅನೂಪ್ ಮೇಲಿನ ಹಲ್ಲೆ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
For More Updates Join our WhatsApp Group :




