ಬಾಬಾ ವಂಗಾ 2025ರ ಭಯಾನಕ ಭವಿಷ್ಯ

ಬಾಬಾ ವಂಗಾ 2025ರ ಭಯಾನಕ ಭವಿಷ್ಯ

ಬಾಬಾ ವಂಗಾ ಬಲ್ಗೇರಿಯಾದಲ್ಲಿ ಜನಿಸಿದ ಪ್ರಸಿದ್ಧ ಪ್ರವಾದಿಯಾಗಿದ್ದು, ಇವರು ಜನವರಿ 31, 1911 ರಂದು ಜನಿಸಿದರು. ಅವರು ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡರು. ನಂತರ ಅವರು ಮಾಡಿರುವ ಅನೇಕ ಭವಿಷ್ಯವಾಣಿಗಳು ನಿಜವಾಗುತ್ತಾ ಬಂತು. 9/11 ದಾಳಿ, ರಾಜಕುಮಾರಿ ಡಯಾನಾ ಸಾವು, ಎರಡನೇ ಮಹಾಯುದ್ಧ ಇವೆಲ್ಲವನ್ನೂ ಬಾಬ ವಂಗಾ ತನ್ನ  ಭವಿಷ್ಯ ವಾಣಿಯಲ್ಲಿ ಹೇಳಿದ್ದರು. ಇವರು 2025 ವರ್ಷದ ಭವಿಷ್ಯವನ್ನು ತಿಳಿಸಿದ್ದಾರೆ.

ಬಲ್ಗೇರಿಯನ್ ಪ್ರವಾದಿ ಬಾಬಾ ವಂಗಾ ಪ್ರಕಾರ 2025ರ ವರ್ಷ ಭಯಾನಕವಾಗಿರಲಿದೆ. ಬಾಬಾ ವಂಗಾ ಅವರು 2025ರ ವರ್ಷಕ್ಕೆ ಸಂಬOಧಪಟ್ಟOತೆ ಹಲವು ಭವಿಷ್ಯ ನುಡಿದಿದ್ದಾರೆ. ಈ ಬಾರಿಯೂ ಅವರ ಭವಿಷ್ಯ ನಿಜವಾದಲ್ಲಿ ಜಗತ್ತು ವಿನಾಶದತ್ತ ಸಾಗಬಹುದು. ಇವರ ದಶಕಗಳ ಹಿಂದೆ ಮಾಡಿದ ಭವಿಷ್ಯವಾಣಿಗಳು ನಿಜ ಎನ್ನುವುದು ಸಾಬೀತಾಗುತ್ತಾ ಬಂದಿದೆ.

ಬಾಬಾ ವಂಗಾ ಅವರ ಈ ಭವಿಷ್ಯವಾಣಿಗಳು ಯುರೋಪಿನ ನಾಶ, ಅಭೂತಪೂರ್ವ ವೈಜ್ಞಾನಿಕ ಪ್ರಗತಿ, ಟೆಲಿಪತಿಯ ಅಭಿವೃದ್ಧಿ, ಭೂಮಿಯ ಹೊರಗಿನ ಜೀವನ, ಜಾಗತಿಕ ಬಿಕ್ಕಟ್ಟು ಅಥವಾ ಅಪೋಕ್ಯಾಲಿಪ್ಸ್ನ ಆರಂಭವನ್ನು ಒಳಗೊಂಡಿವೆ.

ಯುರೋಪಿನ ವಿನಾಶವಾಗುತ್ತದೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ನಿಜವಾಗಿದ್ದರೆ ಯುರೋಪಿನಲ್ಲಿ ಭೀಕರ ಯುದ್ದ ಎದುರಾಗುತ್ತದೆ. ಇದರಿಂದದಾಗಿ ದೊಡ್ಡ ಮಟ್ಟದ ವಿನಾಶ ಉಂಟಾಗುತ್ತದೆ. ಈ ಯುದ್ದದಿಂದಾಗಿ ಜನಸಂಖ್ಯೆ ಕಡಿಮೆಯಾಗುತ್ತದೆ.

ಏಲಿಯನ್‌ಗಳೊಂದಿಗೆ ಸಂಭಾಷಣೆಯನ್ನು ಮಾಡುತ್ತಾರೆ. ಬಾಬಾ ವಂಗಾ ಪ್ರಕಾರ, 2025ರಲ್ಲಿ, ಭೂಮಿಯ ಹೊರಗೆ ಸಂವಹನವನ್ನು ಸ್ಥಾಪಿಸುವಲ್ಲಿ ಮಾನವರು ಯಶಸ್ವಿಯಾಗಬಹುದು. ಅಂದರೆ ಹೊರಗಿನ ಗ್ರಹದ ಜೀವಿಗಳೊಂದಿಗೆ ಸಂವಹನ  ಸಾಧ್ಯವಾಗಬಹುದು.

ಪ್ರಯೋಗಾಲಯದಲ್ಲಿ ಮಾನವ ಅಂಗಾOಗಗಳನ್ನು ತಯಾರಿಸಲಾಗುವುದು. ವೈದ್ಯಕೀಯ ವಿಜ್ಞಾನದ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು. ಇದರ ಪ್ರಕಾರ, ಮಾನವ ಅಂಗಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಬಹುದು. ಇದುವರೆಗೆ ಗುಣಪಡಿಸಲಾಗದ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಇದರಿಂದ ಸಾಧ್ಯವಾಗುತ್ತದೆ.

ಬಾಬಾ ವಂಗಾ ಅವರ ಪ್ರಕಾರ, 2025 ರಲ್ಲಿ ಇಂತಹ ದೊಡ್ಡ ಅನಾಹುತಗಳು ಸಂಭವಿಸುತ್ತವೆ. ಅದು ಭೂಮಿಯನ್ನು ನಾಶಮಾಡುವ ವಿನಾಶಕ್ಕೆ ನಾಂದಿಯಾಗುತ್ತದೆ. ಮಾನವೀಯತೆಯು ಸಂಪೂರ್ಣವಾಗಿ ನಾಶವಾಗದಿದ್ದರೂ, ಅದರ ಅಂತ್ಯ ಪ್ರಾರಂಭವಾಗುತ್ತದೆ. ವಿನಾಶದ ಆರಂಭವಾಗುತ್ತದೆ.

Leave a Reply

Your email address will not be published. Required fields are marked *