ಬೆಂಗಳೂರು: ಸೆಪ್ಟೆಂಬರ್ 7, ಭಾನುವಾರ ಸಂಭವಿಸುವ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನ ಮುಚ್ಚಲ್ಪಡಲಿದೆ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟಿಸಿದೆ. ಮಧ್ಯಾಹ್ನದವರೆಗೆ ಮಾತ್ರ ದರ್ಶನ: ದೇವಸ್ಥಾನವು ಭಾನುವಾರ ಬೆಳಿಗ್ಗೆ 11:00 ಗಂಟೆಯವರೆಗೆ ಭಕ್ತರಿಗೆ ತೆರೆಯಲಾಗಿದ್ದು, ಗವಿಗಂಗಾಧರೇಶ್ವರ ಸ್ವಾಮಿಗೆ ಅಭಿಷೇಕದ ನಂತರ ದೇವಾಲಯದ ಬಾಗಿಲು ಬಂದ್ ಮಾಡಲಾಗುತ್ತದೆ. ಆದಳಿತ ಮಂಡಳಿಯ ಪ್ರಕಾರ, ಗ್ರಹಣ ಸಮಯದಲ್ಲಿ ದೇವಸ್ಥಾನ ಬಂದ್ ಇಡುವುದು ಶಾಸ್ತ್ರಸಮ್ಮತ ಕ್ರಮ, ಹಾಗಾಗಿ ಭಕ್ತರಿಂದ ಸಹಕಾರವನ್ನು ಕೇಳಲಾಗಿದೆ.
ಗ್ರಹಣದ ಅವಧಿ: ಈ ಬಾರಿ ಸಂಭವಿಸುವ ಚಂದ್ರಗ್ರಹಣವು ಸಂಪೂರ್ಣ ಖಗ್ರಾಸ ಗ್ರಹಣವಾಗಿದ್ದು, ಸುಮಾರು 4 ಗಂಟೆಗಳ ಕಾಲ ಇರುವುದು ನಿರೀಕ್ಷೆಯಾಗಿದೆ. ಗ್ರಹಣ ಸ್ಪರ್ಶ:ಬೆಳಗ್ಗೆ 9:30 , ಗ್ರಹಣ ಮೋಕ್ಷ: ಮಧ್ಯಾಹ್ನ 1:30 ಅಂದರೆ, ಈ ಅವಧಿಯೊಳಗೆ ಚಂದ್ರಗ್ರಹಣದ ಪೂರ್ಣ ಪ್ರಭಾವವಿರಲಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.
ದೇವಸ್ಥಾನ ಮರುತೆರೆಯುವ ಸಮಯ: ಭಾನುವಾರದ ಗ್ರಹಣದ ನಂತರ, ಸೋಮವಾರ ಬೆಳಗ್ಗೆ ದೇವಸ್ಥಾನ ಪುನಃ ಭಕ್ತರಿಗೆ ತೆರೆದಿರುತ್ತದೆ ಅದರೊಂದಿಗೆ ಶುದ್ಧೀಕರಣ ಕ್ರಿಯೆಗಳು ಮತ್ತು ವಿಶೇಷ ಪೂಜಾಕ್ರಮಗಳನ್ನು ನಡೆಸಲಾಗುವುದು.
ಭಕ್ತರಿಗೆ ಮನವಿ: ದೇವಸ್ಥಾನ ಬಂದ್ ಇರುವ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡದಂತೆ, ಪೂಜೆಗಳಿಗೆ ಹೋಗುವ ಉದ್ದೇಶವಿದ್ದಲ್ಲಿ ಪೂರ್ವಾಹ್ನ 11 ಗಂಟೆಗೆ ಮುನ್ನ ತೆರಳುವಂತೆ ಆಡಳಿತ ಮಂಡಳಿ ಕೋರಿದೆ. ಚಂದ್ರಗ್ರಹಣದ ಸಮಯದಲ್ಲಿ ಆಚರಣೆಯಾದ ನಿಯಮಗಳನ್ನು ಪಾಲಿಸಿ, ಧಾರ್ಮಿಕ ಪದ್ಧತಿಗೆ ಗೌರವ ನೀಡಿ – ಇವು ಶಾಸ್ತ್ರಗಳಲ್ಲಿ ನಿಕ್ಷಿಪ್ತವಾದ ನಂಬಿಕೆಗಳು.
For More Updates Join our WhatsApp Group :