ಬಾಗ್ಪತ್ : ಅಪರೂಪದ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಭಾಗ್ಪತ್ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳನ್ನು ಹೊಂದಿರುವ ಕರು ಜನಿಸಿದೆ. ಆ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಕರು ಆರೋಗ್ಯವಾಗಿದ್ದು, ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಸ್ಥಳೀಯರು ಮತ್ತು ಬಾಗ್ಪತ್ ಸುತ್ತಮುತ್ತಲಿನ ಜನರು ಸೇರಲು ಪ್ರಾರಂಭಿಸಿದ್ದಾರೆ. ಜೂನ್ 18ರಂದು ಈ ಕರು ಜನಿಸಿದೆ. ಗ್ರಾಮದ ಸುತ್ತಮುತ್ತಲಿನ ಜನರು ಇದನ್ನು ಪವಾಡದ ಘಟನೆ ಎಂದು ಕರೆದಿದ್ದಾರೆ.

ಈ ಕರುವನ್ನು ದೇವರ ಆಶೀರ್ವಾದ ಎಂದು ಪೂಜಿಸಲು ಪ್ರಾರಂಭಿಸಿದ್ದಾರೆ. ಕೆಲವರು ಕರುವಿಗೆ ಹಣವನ್ನು ಕೂಡ ನೀಡುತ್ತಿದ್ದಾರೆ.