Bangalore ಪೊಲೀಸರ ಭರ್ಜರಿ ಶಾಕ್: Drugs ದಂಧೆ

Bangalore ಪೊಲೀಸರ ಭರ್ಜರಿ ಶಾಕ್: Drugs ದಂಧೆ

ವಿವಿಧ ಪ್ರಕರಣಗಳಲ್ಲಿ ಐವರು ಅಂದರ್

ಬೆಂಗಳೂರು : ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ರಾಜ್ಯದಲ್ಲಿ ಡ್ರಗ್ಸ್​​ ಹಾವಳಿ ಮುಂದುವರಿದಿದೆ. ಖಾಕಿ ಚಾಪೆ ಕೆಳಗೆ ತೂರಿದರೆ ದಂಧೆಕೋರರು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಡ್ರಗ್ಸ್​​ ಪೆಡ್ಲರ್​​ಗಳಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್​​ ಕೊಟ್ಟಿದ್ದಾರೆ. 12 ವರ್ಷಗಳಿಂದ ಡ್ರಗ್ಸ್​ ಪೆಡ್ಲಿಂಗ್ ನಡೆಸುತ್ತಿದ್ದ ಆರೋಪಿ ಸೇರಿ ವಿವಿಧ ಪ್ರಕರಣಗಲ್ಲಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ನೈಜೀರಿಯಾ ಪ್ರಜೆಯ ಬಂಧನ

ಭಾರತೀಯ ಮಹಿಳೆ ಮದುವೆಯಾಗಿ 12 ವರ್ಷಗಳಿಂದ ಡ್ರಗ್ಸ್​ ಪೆಡ್ಲಿಂಗ್ ನಡೆಸುತ್ತಿದ್ದ ನೈಜೀರಿಯಾ ಪ್ರಜೆ ಇಮ್ಯಾನ್ಯುಯಲ್​​ ಎಂಬಾತನನ್ನು ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. 2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಇಮ್ಯಾನ್ಯುಯಲ್, ಬೆಂಗಳೂರಿಗೆ ಬಂದು ಇಲ್ಲಿಯ ಮಹಿಳೆಯನ್ನೇ ಮದುವೆ ಕೂಡ ಆಗಿದ್ದ. 4-5 ಮನೆಗಳನ್ನು ಬಾಡಿಗೆ ಪಡೆದು ಡ್ರಗ್ ಪೆಡ್ಲಿಂಗ್ ನಡೆಸ್ತಿದ್ದ ಈತ, ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಸಬ್ ಪೆಡ್ಲರ್ಸ್​ಗಳಿಗೆ ಡ್ರಗ್ ಮಾರಾಟ ಮಾಡ್ತಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಹೆಬ್ಬಗೋಡಿ ಪೊಲೀಸರು, ಆರೋಪಿಯನ್ನು ಬಂಧಿಸಿ MDMA, ಎಲ್​ಎಸ್​ಡಿ, ವಿವಿಧ ಮಾದರಿಯ ಸಿಂಥೆಟಿಕ್ ಡ್ರಗ್ಸ್ ಸೇರಿ 14 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸೀಜ್​ ಮಾಡಿದ್ದಾರೆ. ಡ್ರಗ್ಸ್​ ಸೀಜ್ ಪ್ರಕರಣದಲ್ಲಿ ಇನ್ನುಳಿದವರಿಗಾಗಿ ಶೋಧ ಮುಂದುವರಿದಿದೆ.

ಆಟೋ ಡ್ರೈವಿಂಗ್​ ನೆಪದಲ್ಲಿ ಗಾಂಜಾ ಪೆಡ್ಲಿಂಗ್​

ಡೆಲಿವರಿ ಬಾಯ್, ಆಟೋ ಡ್ರೈವಿಂಗ್ ನೆಪದಲ್ಲಿ ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ರಾಹುಲ್​​ ಮತ್ತು ಪ್ರೇಮ್​​ ಬಂಧಿತರಾಗಿದ್ದು, ಇವರು ತಮಿಳುನಾಡಿನಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದರು. ರಾಹುಲ್ ಡೆಲಿವರಿ ಬಾಯ್ ಆಗಿದ್ರೆ, ಪ್ರೇಮ್ ಆಟೋ ಡ್ರೈವರ್ ಆಗಿದ್ದ. ಬಂಧಿತರಿಂದ 3 ಲಕ್ಷ ಮೌಲ್ಯದ 7 ಕೆಜಿ 500 ಗ್ರಾಂ ಗಾಂಜಾ ಸೀಜ್‌ ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *