ಹಬ್ಬಗಳ ಸರಮಾಲೆ; ಪ್ರದೇಶವಾರು ವ್ಯತ್ಯಾಸ.
ನವದೆಹಲಿ: ಮಾರ್ಚ್ ತಿಂಗಳಲ್ಲಿ ಹಬ್ಬಗಳ ಸರಮಾಲೆಯೇ ಇದೆ. ಹೋಳಿ, ಯುಗಾದಿ, ರಂಜಾನ್, ಮಹಾವೀರ್ ಜಯಂತಿ, ಶ್ರೀರಾಮ ನವಮಿ ಇತ್ಯಾದಿ ಹಲವು ಹಬ್ಬ ಹರಿದಿನಗಳು ಮಾರ್ಚ್ನ್ಲಲಿ ಇದೆ. ಆರ್ಬಿಐ ಕ್ಯಾಲಂಡರ್ ಪ್ರಕಾರ, ಆ ತಿಂಗಳು ಶನಿವಾರ, ಭಾನುವಾರಗಳನ್ನೂ ಒಳಗೊಂಡು ಒಟ್ಟು 18 ರಜಾದಿನಗಳಿವೆ. ಪ್ರದೇಶವಾರು ರಜೆಗಳಲ್ಲಿ ವ್ಯತ್ಯಾಸ ಇದೆ. ಹೋಳಿ ಹಬ್ಬಕ್ಕೆ ಕರ್ನಾಟಕದಲ್ಲಿ ರಜೆ ಇಲ್ಲ. ಆದರೆ, ಉತ್ತರಪ್ರದೇಶದಲ್ಲಿ ಆ ಹಬ್ಬಕ್ಕೆ ಮೂರು ದಿನ ರಜೆ ಇದೆ. ಕರ್ನಾಟಕದಲ್ಲಿ ಶ್ರೀರಾಮನವಮಿಗೆ ರಜೆ ಇರುವುದಿಲ್ಲ, ಆದರೆ, ಮಹಾವೀರ ಜಯಂತಿಗೆ ರಜೆ ಇರುತ್ತದೆ. ಕರ್ನಾಟಕದಲ್ಲಿ ಶನಿವಾರ, ಭಾನುವಾರದ ರಜೆಗಳೂ ಸೇರಿ ಒಟ್ಟು 10 ದಿನಗಳು ಮಾರ್ಚ್‌ನಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ.
2026ರ ಮಾರ್ಚ್‌ನಲ್ಲಿ ಬ್ಯಾಂಕ್ ರಜಾದಿಗಳು
- ಮಾರ್ಚ್ 1: ಭಾನುವಾರದ ರಜೆ
- ಮಾರ್ಚ್ 2, ಸೋಮವಾರ: ಹೋಳಿ ಹಬ್ಬ (ಉ.ಪ್ರ.ದಲ್ಲಿ ರಜೆ)
- ಮಾರ್ಚ್ 3, ಮಂಗಳವಾರ: ಹೋಳಿ ಹಬ್ಬ (ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ್, ಉತ್ತರಪ್ರದೇಶ ಮೊದಲಾದ ಹಲವು ರಾಜ್ಯಗಳಲ್ಲಿ ರಜೆ)
- ಮಾರ್ಚ್ 4, ಬುಧವಾರ: ಹೋಳಿ ಹಬ್ಬ, ಧುಲೇತಿ, ಯಾವೊಸಾಂಗ್ (ಉತ್ತರ ಪ್ರದೇಶ, ದೆಹಲಿ, ಛತ್ರೀಸ್ಗಡ್, ಜಾರ್ಖಂಡ್ ಮೊದಲಾದ ಹಲವು ರಾಜ್ಯಗಳಲ್ಲಿ ರಜೆ)
- ಮಾರ್ಚ್ 8: ಭಾನುವಾರದ ರಜೆ
- ಮಾರ್ಚ್ 13, ಶುಕ್ರವಾರ: ಚಾಪಚಾರ್ ಕುತ್ (ಮಿಝೋರಾಂ, ಜಮ್ಮುವಿನಲ್ಲಿ ರಜೆ)
- ಮಾರ್ಚ್ 14: ಎರಡನೇ ಶನಿವಾರದ ರಜೆ
- ಮಾರ್ಚ್ 15: ಭಾನುವಾರದ ರಜೆ
- ಮಾರ್ಚ್ 17, ಮಂಗಳವಾರ: ಶಬಿ ಖಾದರ್ (ಮಣಿಪುರ್, ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
- ಮಾರ್ಚ್ 19, ಗುರುವಾರ: ಯುಗಾದಿ, ಗುಧಿ ಪಡವಾ, ಸಜಿಬು ನೊಂಗ್ಮಪಣ್ಬ (ಅನೇಕ ರಾಜ್ಯಗಳಲ್ಲಿ ರಜೆ)
- ಮಾರ್ಚ್ 20, ಶುಕ್ರವಾರ: ಈದ್ ಉಲ್ ಫಿತರ್, ರಂಜಾನ್, ಜಮಾತ್ ಉಲ್ ವಿದಾ ಹಬ್ಬ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ಮಾರ್ಚ್ 21, ಶನಿವಾರ: ರಂಜಾನ್ ಈದ್, ಖುದುಬ್ ಇ ರಂಜಾನ್ (ಮೇಘಾಲಯ, ಮಧ್ಯಪ್ರದೇಶ, ಹರ್ಯಾಣ, ಉತ್ತರಾಖಂಡ್, ರಾಜಸ್ಥಾನ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ರಜೆ)
- ಮಾರ್ಚ್ 22: ಭಾನುವಾರದ ರಜೆ
- ಮಾರ್ಚ್ 26, ಗುರುವಾರ: ಶ್ರೀರಾಮನವಮಿ ಹಬ್ಬ (ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ರಜೆ)
- ಮಾರ್ಚ್ 27, ಶುಕ್ರವಾರ: ಶ್ರೀರಾಮನವಮಿ (ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ರಜೆ)
- ಮಾರ್ಚ್ 28: ನಾಲ್ಕನೇ ಶನಿವಾರದ ರಜೆ
- ಮಾರ್ಚ್ 29: ಭಾನುವಾರದ ರಜೆ
- ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ (ಅನೇಕ ರಾಜ್ಯಗಳಲ್ಲಿ ರಜೆ)
ಕರ್ನಾಟಕದಲ್ಲಿ ಮಾರ್ಚ್‌ನಲ್ಲಿ ಬ್ಯಾಂಕ್ ರಜಾದಿನಗಳು
- ಮಾರ್ಚ್ 1: ಭಾನುವಾರದ ರಜೆ
- ಮಾರ್ಚ್ 8: ಭಾನುವಾರದ ರಜೆ
- ಮಾರ್ಚ್ 14: ಎರಡನೇ ಶನಿವಾರದ ರಜೆ
- ಮಾರ್ಚ್ 15: ಭಾನುವಾರದ ರಜೆ
- ಮಾರ್ಚ್ 19, ಗುರುವಾರ: ಯುಗಾದಿ ಹಬ್ಬ
- ಮಾರ್ಚ್ 20, ಶುಕ್ರವಾರ: ರಂಜಾನ್ ಹಬ್ಬ
- ಮಾರ್ಚ್ 22: ಭಾನುವಾರದ ರಜೆ
- ಮಾರ್ಚ್ 28: ನಾಲ್ಕನೇ ಶನಿವಾರದ ರಜೆ
- ಮಾರ್ಚ್ 29: ಭಾನುವಾರದ ರಜೆ
- ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ
ಬ್ಯಾಂಕುಗಳಿಗೆ ರಜೆ ಎಂದರೆ ಕಚೇರಿಯ ಬಾಗಿಲು ಮಾತ್ರ ಬಂದ್ ಆಗಿರುತ್ತದೆ. ಎಟಿಎಂ, ಯುಪಿಐ, ನೆಟ್ಬ್ಯಾಂಕಿಂಗ್ ಸೇವೆಗಳ ಮೂಲಕ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳಿಗೆ ನಿರಂತರವಾಗಿ ಅವಕಾಶ ಇರುತ್ತದೆ. ಡಿಮ್ಯಾಂಡ್ ಡ್ರಾಫ್ಟ್ ಇತ್ಯಾದಿ ಕಾರ್ಯಗಳಿಗೆ ಕಚೇರಿಗೆ ಹೋಗಬೇಕಾದವರು ರಜಾದಿನಗಳ ಬಗ್ಗೆ ಗಮನ ಹರಿಸುವುದು ಸರಿ.
For More Updates Join our WhatsApp Group :




