9 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ಕರ್ನಾಟಕದ ಬಿಜೆಪಿ ನಾಯಕನಿಗೂ ಅವಕಾಶ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಟ್ಟು 9 ರಾಜ್ಯಗಳಿಗೆ ನೂತನ ರಾಜ್ಯಪಾಲರು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್​ ಅವರನ್ನು ನೇಮಿಸಿ ಶನಿವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರು ಮತ್ತು ಮೂರು ರಾಜ್ಯಗಳಿಗೆ ಬೇರೆ ರಾಜ್ಯಗಳ ಹಾಲಿ ರಾಜ್ಯಪಾಲರನ್ನು ನೇಮಿಸಲಾಗಿದೆ.

ನೂತನ ರಾಜ್ಯಪಾಲರಾಗಿ ನೇಮಕಗೊಂಡವರಲ್ಲಿ ಕರ್ನಾಟಕದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಸಿ.ಹೆಚ್.ವಿಜಯಶಂಕರ್ ಕೂಡ ಸೇರಿದ್ದಾರೆ. ಇವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಹರಿಭಾವು ಬಾಗಡೆ ರಾಜಸ್ಥಾನದ ಗವರ್ನರ್ ಆಗಿ ನೇಮಕವಾಗಿದ್ದಾರೆ. ತ್ರಿಪುರಾ ಮಾಜಿ ಡಿಸಿಎಂ ಜಿಷ್ಣು ದೇವ್ ವರ್ಮಾ ತೆಲಂಗಾಣದ ರಾಜ್ಯಪಾಲ ಹುದ್ದೆಯ ಅವಕಾಶ ಪಡೆದಿದ್ದಾರೆ.

ಸಿಕ್ಕಿಂ ರಾಜ್ಯಪಾಲರಾಗಿ ಮಾಜಿ ರಾಜ್ಯಸಭಾ ಸಂಸದ ಓಂ ಪ್ರಕಾಶ್ ಮಥುರಾ, ಜಾರ್ಖಂಡ್ ರಾಜ್ಯಪಾಲರಾಗಿ ಮಾಜಿ ಕೇಂದ್ರ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಮತ್ತು ಛತ್ತೀಸ್​ಗಡ ರಾಜ್ಯಪಾಲರಾಗಿ ಅಸ್ಸೋಂನ ಮಾಜಿ ಸಂಸದ ರಮೇನ್ ದೆಕಾ ಅವರನ್ನು ರಾಷ್ಟ್ರಪತಿ ನೇಮಿಸಿದ್ದಾರೆ.

Leave a Reply

Your email address will not be published. Required fields are marked *