ಬಿಬಿಎಂಪಿ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ನಂದಕುಮಾರ್ ಮತ್ತು ಬಿಬಿಎಂಪಿ ಕಾರ್ಯನಿರತ ಗುತ್ತಿದಾರರ ಸಂಘದ ಅಧ್ಯಕ್ಷರಾದ ಕೆ.ಟಿ.ಮಜುನಾಥ್ ರವರ ನೇತೃತ್ವದಲ್ಲಿ ಶೇಕಡ 25%ಬಾಕಿ ಬಿಲ್ ಬಿಡುಗಡೆಗಾಗಿ ಒತ್ತಾಯಿಸಿ ಕಾಮಗಾರಿ ಸ್ಥಗಿತಗೊಳಿಸಿ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ನೂರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗುತ್ತಿಗೆದಾರರು ಸಂಪೂರ್ಣ ಕಾಮಗಾರಿ ಬಿಲ್ ಮೊತ್ತವನ್ನು 75ರಷ್ಟು ಬಿಡುಗಡೆ ಮಾಡಿ 25%ರಷ್ಟು ಜಿ.ಎಸ್.ಟಿ.18%ಮತ್ತು ಇನ್ನಿತರೆ ಕಟಾವಣೆ ಮಾಡುತ್ತಿದ್ದಾರೆ. ಸಂಪೂರ್ಣ ಬಿಲ್ ಪಾವತಿಯಾಗದೇ ಇರುವ ಕಾರಣ ಗುತ್ತಿಗೆದಾರ ಸಂಕಷ್ಟದಲ್ಲಿ ಇದ್ದಾರೆ.
ಬಿಲ್ ಪಾವತಿ ವಿಳಂಬವಾಗುತ್ತಿರುವುದರಿಂದ ಬ್ಯಾಂಕ್ ನಲ್ಲಿ ಸಾಲದ ಮೇಲೆ ಬಡ್ಡಿ ಏರಿಕೆಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ ಕೊಡಲೆ ಶೇಕಡ 25%ರಷ್ಟು ಗುತ್ತಿಗೆದಾರರಿಗೆ ಪಾವತಿ ಮಾಡಿದರೆ ಸಂಕಷ್ಟದಿಂದ ಪಾರಾಗಬಹುದು.
ಬಿಬಿಎಂಪಿ ಮುಖ್ಯ ಆಯುಕ್ತರು ಗುತ್ತಿಗೆದಾರರ ಸಮಸ್ಯೆಗಳು ಹೇಳುತ್ತಿಲ್ಲ, ಉಡಾಫೆ ಉತ್ತರ ನೀಡುತ್ತಾರೆ. ಇಂದಿನಿಂದ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು, ಗುಂಡಿ ಮುಚ್ಚುವ ಕಾಮಗಾರಿಯನ್ನು ಯಾವ ಗುತ್ತಿಗೆದಾರರು ಮಾಡುವುದಿಲ್ಲ.
ಬಿಬಿಎಂಪಿ ಗುತ್ತಿಗೆದಾರರ ಫೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ ಇಲ್ಲಿ ಮಾಡುವಂತಿಲ್ಲ ಅದರಿಂದ ನಿಮ್ಮನ್ನ ಬಂಧಿಸಲಾಗುತ್ತದೆ ಎಂದು ಹೇಳಿ ನೂರಾರು ಗುತ್ತಿಗೆದಾರರನ್ನು ಬಂಧಿಸಿದರು.