ಹುಬ್ಬಳ್ಳಿ : ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ಬಿಜೆಪಿ ಅವರು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ನೀಡಿ ಖರೀದಿಸುತ್ತಿದ್ದಾರೆ ಎಂದು ಸ್ಪೋಟಕ ವಾದಂತಹ ಆರೋಪ ಮಾಡಿದ್ದರು. ಇದಾದ ಬಳಿಕ ಇದೀಗ ಸಚಿವ ಎನ್.ಎಸ್ ಬೋಸರಾಜ್ ಅವರು, ನಮ್ಮ ಪಕ್ಷದ 9 ಜನರನ್ನು ಸಂಪರ್ಕಿಸಿದ್ದು, ಈ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಪರ್ಕಿಸಿದ 24 ಗಂಟೆಯಲ್ಲಿ ನನಗೆ ಮಾಹಿತಿ ಬಂತು. ಉತ್ತರ ಕರ್ನಾಟಕದವರು ಸೇರಿ ಕೆಲವರನ್ನು ಸಂಪರ್ಕಿಸಿದ್ದರು. ಆಪರೇಷನ್ ಕಮಲದ ಮೊದಲ ಪ್ರಯೋಗ ಬಯಲಾಯಿತು.ನಮ್ಮವರಿಗೆ 100 ಕೋಟಿ ಅಥವಾ 50 ಕೋಟಿ ಆಮಿಷ ಇರಬಹುದು. ಆದರೆ ಆಫರ್ ಮಾಡಿದ್ದಂತು ನಿಜ ಎಂದು ಸಚಿವ ಬೋಸರಾಜ್ ಸ್ಪೋಟಕವಾದಂತ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ 6ರಿಂದ 7 ಜನ ಇದ್ದಾರೆ.
ಸರ್ಕಾರದ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ಕುತಂತ್ರ ನಡೆಸಿದ್ದಾರೆ. ಅಮಿತ್ ಶಾ ಗೆ ಇಬ್ಬರು ಸೇರಿಕೊಂಡು ಮಾತುಕೊಟ್ಟಿದ್ದಾರೆ. 6 ತಿಂಗಳಲ್ಲಿ ಸರ್ಕಾರ ತೆಗೆಯುತ್ತೇವೆ ಎಂದು ಮಾತು ಕೊಟ್ಟಿದ್ದಾರೆ.ಪ್ಲಾನ್ ಮತ್ತು ಕುತಂತ್ರ ಮಾಡೋರು ಅವರಿಬ್ಬರೇ. ಅಪ್ಪ ಮಗ ಸೇರಿಕೊಂಡು ಕುತಂತ್ರವನ್ನು ಮಾಡುತ್ತಿದ್ದಾರೆ. ಅವರ ಮಾತನ್ನು ಬಿಜೆಪಿಯವರು ಕೇಳುತ್ತಿದ್ದಾರೆ. ಕೊನೆಗೆ ಬಿಜೆಪಿಯವರು ಜೀರೋ ಆಗುತ್ತಾರೆ ಇದೀಗ ಮೂಡ ಹಗರಣ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಏನೇ ಮಾಡಿದರು ಸಿಎಂ ಸಿದ್ದರಾಮಯ್ಯ ಸರ್ಕಾರ ತೆಗೆಯೋಕೆ ಆಗೋಲ್ಲ. ಇಡಿ, ಸಿಬಿಐ ಎಲ್ಲಾ ಪ್ರಯೋಗ ಆಯಿತು. ಕೊನೆಗೆ ಮುಡಾ ಹಗರಣ ತಂದರು. ಅವರು ತೋಡಿಕೊಂಡ ಹಳ್ಳದಲ್ಲಿ ಅವರೇ ಮುಳುಗುತ್ತಾರೆ. ರಾಜಭವನ ಕಚೇರಿ ಜೆಡಿಎಸ್-ಬಿಜೆಪಿ ಕಚೇರಿಯಾಗಿದೆ. ಏನೇ ಮಾಡಿದರು ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಅಲಗಾಡಿಸಲು ಆಗುವುದಿಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಯತ್ನಿಸಿದ್ದರು ಎಂದು ಹುಬ್ಬಳ್ಳಿಯಲ್ಲಿ ಸಚಿವ ಎನ್ಎಸ್ ಬೋಸರಾಜ್ ಹೊಸ ಬಾಂಬ್ ಸಿಡಿಸಿದರು.