ಏಷ್ಯಾ ಕಪ್ 2023 ಶುರುವಾಗುವ ಮೊದಲೇ ವಿಘ್ನಗಳ ಮೇಲೆ ವಿಘ್ನ..!!

ಇನ್ನೇನು ನಾಲ್ಕು ದಿನಗಳಲ್ಲಿ ಏಷ್ಯಾಕಪ್ 2023 ಪಾಕಿಸ್ತಾನ ಮತ್ತು ಶ್ರೀಲಂಕಾ ನೆಲದಲ್ಲಿ ಆರಂಭವಾಗಲಿದೆ. ಆದರೆ ಈ ಪಂದ್ಯಾವಳಿಗೂ ಮುನ್ನ ಕೊರೊನಾ ಛಾಯೆ ಆವರಿಸಿದ್ದು, ಏಷ್ಯಾ ಕಪ್’ನಲ್ಲಿ ಬಿಕ್ಕಟ್ಟಿನ ವಾತಾವರಣವನ್ನು ಸೃಷ್ಟಿಸಿದೆ. ಏಷ್ಯಾ ಕಪ್ ಆರಂಭಕ್ಕೂ ಮುನ್ನವೇ ಆತಿಥೇಯ ಶ್ರೀಲಂಕಾ ತಂಡ ಕೊರೊನಾ ವೈರಸ್’ನ ಹಿಡಿತಕ್ಕೆ ಸಿಲುಕಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಇಬ್ಬರು ಆಟಗಾರರ ಕೊರೊನಾ ವೈರಸ್ ವರದಿ ಪಾಸಿಟಿವ್ ಬಂದಿದೆ.

ಏಷ್ಯಾ ಕಪ್

ಶ್ರೀಲಂಕಾದ ಆಟಗಾರರಾದ ಅವಿಷ್ಕಾ ಫರ್ನಾಂಡೋ ಮತ್ತು ವಿಕೆಟ್ ಕೀಪರ್ ಕುಸಲಾ ಪೆರೆರಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಆಟಗಾರರು ಏಷ್ಯಾಕಪ್ ತಂಡದ ಭಾಗವಾಗುತ್ತಾರೆಯೇ ಎಂಬುದರ ಕುರಿತು ಮಾಹಿತಿ ಇನ್ನಷ್ಟೇ ಹೊರಬೀಳಲಿದೆ. ಈ ಮೊದಲು ಶ್ರೀಲಂಕಾ ತಂಡಕ್ಕೆ ದೊಡ್ಡ ಹಿನ್ನಡೆ ಆಗಿತ್ತು. ಶ್ರೀಲಂಕಾದ ಸ್ಟಾರ್ ಆಲ್ ರೌಂಡರ್ ಹಸರಂಗ ಏಷ್ಯಾಕಪ್ ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಇತ್ತೀಚೆಗೆ ಆಡಿದ ಲಂಕಾ ಪ್ರೀಮಿಯರ್ ಲೀಗ್ ವೇಳೆ ಹಸರಂಗ ಗಾಯಗೊಂಡಿದ್ದರು. ಗಾಯದ ನಡುವೆಯೂ ಹಸರಂಗ ಆಟ ಮುಂದುವರಿಸಿ ಅಮೋಘ ಪ್ರದರ್ಶನ ನೀಡಿದ್ದರು. ಹಸರಂಗ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸುವುದರ ಜೊತೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈಗ ಹಸರಂಗ ಅವರ ಗಾಯ ಗಂಭೀರವಾಗಿದೆ.

ಟೂರ್ನಿಯಿಂದ ನಿರ್ಗಮಿಸುವ ಬಗ್ಗೆ ಒಂದೆರೆಡು ದಿನದಲ್ಲಿ ಮಾಹಿತಿ ಸಿಗಲಿದೆ. ಟೂರ್ನಿಯ ಐದು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಟೀಂ ಇಂಡಿಯಾ ಪಾಕಿಸ್ತಾನದ ನೆಲದಲ್ಲಿ ಒಂದೇ ಒಂದು ಪಂದ್ಯವನ್ನು ಆಡುವುದಿಲ್ಲ ಎಂಬುದು ಗಮನಾರ್ಹ ವಿಚಾರ. ಅಂತಿಮ ಪಂದ್ಯವೂ ಶ್ರೀಲಂಕಾದಲ್ಲಿ ನಡೆಯಲಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *