ಬೇಗುಸರಾಯ್ || ಓಡಿ ಹೋಗಿ ವಿವಾಹವಾಗಿ ಕೇವಲ 8 ತಿಂಗಳಿಗೆ ಆತ್ಮಹ*ತ್ಯೆಗೆ ಶರಣಾದ ದಂಪತಿ.

ಬೇಗುಸರಾಯ್ || ಓಡಿ ಹೋಗಿ ವಿವಾಹವಾಗಿ ಕೇವಲ 8 ತಿಂಗಳಿಗೆ ಆತ್ಮಹ*ತ್ಯೆಗೆ ಶರಣಾದ ದಂಪತಿ.

ಬೇಗುಸರಾಯ್ : ಪೋಷಕರ ವಿರೋಧ ಕಟ್ಟಿಕೊಂಡು ಓಡಿ ಹೋಗಿ ಮದುವೆ ಯಾಗಿದ್ದ ದಂಪತಿ ಕೇವಲ 8 ತಿಂಗಳಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಬೇಗುಸರಾಯ್ನಲ್ಲಿ ನಡೆದಿದೆ. ಅವರದ್ದು ಅಂತರ್ಜಾತಿ ವಿವಾಹ. ಪೋಷಕರ ವಿರೋಧಿಸಿ ಮದುವೆಯಾಗುವವರೆಗೆ ಇದ್ದ ಧೈರ್ಯ ಮುಂದೇಕೆ ಇರಲಿಲ್ಲ ಎಂಬುದು ಪ್ರಶ್ನೆಯಾಗಿದೆ. ಈ ಘಟನೆ ಬಹದ್ದೂರ್ಪುರ ಗ್ರಾಮದಲ್ಲಿ ನಡೆದಿದೆ.

19 ವರ್ಷದ ಶುಭಂ ಕುಮಾರ್ ಮತ್ತು ಅವರ 18 ವರ್ಷದ ಪತ್ನಿ ಮುನ್ನಿ ಕುಮಾರಿ ಮಂಗಳವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಕಠಿಣ ಹೆಜ್ಜೆ ಇಡುವ ಮೊದಲು, ಶುಭಂ ಅವರ ಫೋಟೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಅಲ್ವಿದಾ (ವಿದಾಯ) ಎಂದು ಬರೆದಿದ್ದಾರೆ ಎಂದು ವರದಿಯಾಗಿದೆ.

ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 2024 ರಲ್ಲಿ ಮನೆಯಿಂದ ಓಡಿಹೋಗಿ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು. ಅವರ ಮದುವೆಯ ನಂತರ, ಅವರ ಕುಟುಂಬವು ಈ ಸಂಬಂಧವನ್ನು ವಿರೋಧಿಸಿತು ಮತ್ತು ಒಂದು ಪಂಚಾಯತಿ ಸಹ ನಡೆಸಿತು, ಆ ಸಮಯದಲ್ಲಿ ಮುನ್ನಿಯ ಸಿಂಧೂರವನ್ನು ಸ್ಪ್ರೈಟ್ನಿಂದ ತೊಳೆದು, ಆಕೆಯನ್ನು ಕುಟುಂಬಕ್ಕೆ ಹಿಂದಿರುಗಿಸಲಾಯಿತು.

Leave a Reply

Your email address will not be published. Required fields are marked *