ಸ್ಕ್ವಿಡ್ ಗೇಮ್ ಖ್ಯಾತಿಯ ನಟ ವಿ ಹಾ ಜೂನ್ ಅವರು ಭಾರತೀಯ ಸಿನಿಮಾಗಳನ್ನು ಪ್ರಶಂಸಿಸಿದ್ದಾರೆ. ಅವರ ಅಚ್ಚುಮೆಚ್ಚಿನ ಚಿತ್ರಗಳ ಪಟ್ಟಿಯಲ್ಲಿ ‘3 ಈಡಿಯಟ್ಸ್’, ‘ಕಿಲ್’ ಮತ್ತು ‘ಕೆಜಿಎಫ್’ ಸೇರಿವೆ. ಕೆಜಿಎಫ್ ಚಿತ್ರದ ಜಾಗತಿಕ ಯಶಸ್ಸು ಹಾಗೂ ಭಾರತೀಯ ಸಿನಿಮಾದ ಬೆಳವಣಿಗೆಯನ್ನು ಇದು ಸೂಚಿಸುತ್ತದೆ. ವಿ ಹಾ ಜೂನ್ ಅವರು ಭಾರತೀಯ ಸಿನಿಮಾಗಳಲ್ಲಿ ನಟಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಫ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಮಾಡಿದ ಸಾಧನೆ ದೊಡ್ಡದು. ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಮೈಲೇಜ್ ನೀಡಿತು ಎಂದೇ ಹೇಳಬಹುದು. ಈ ಸಿನಿಮಾನ ಈಗಲೂ ಜನರು ನೆನಪಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರ ಕೊರಿಯಾ ಕಲಾವಿದರನ್ನು ಕೂಡ ತಲುಪಿದೆ. ‘ಸ್ಕ್ವಿಡ್ ಗೇಮ್’ ಸೀರಿಸ್ನ ಕಲಾವಿದ ಈ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ಇಷ್ಟ ಎಂದಿದ್ದಾರೆ.
‘ಸ್ಕ್ವಿಡ್ ಗೇಮ್’ ವೆಬ್ ಸೀರಿಸ್ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಈ ಸೀರಿಸ್ ಜನರಿಗೆ ಸಖತ್ ಇಷ್ಟ ಆಗಿದೆ. ಈ ಸರಣಿಯ ಫೈನಲ್ ಸೀರಿಸ್ ಇತ್ತೀಚೆಗೆ ಪ್ರಸಾರ ಆರಂಭಿಸಿದೆ. ಈ ಸೀಸನ್ನ ಕೊನೆಯ ಸೀಸನ್ ಕೆಲವರಿಗೆ ಇಷ್ಟ ಆಗಿದೆ ಇನ್ನೂ ಕೆಲವರಿಗೆ ಇಷ್ಟ ಆಗಿಲ್ಲ. ಈ ಸರಣಿಯಲ್ಲಿ ವಿ ಹಾ ಜೂನ್ ಅವರು ನಟಿಸಿದ್ದಾರೆ. ಅವರು ವಾಂಗ್ ಜುನ್ ಹೋ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಭಾರತ ಸಿನಿಮಾ ಇಷ್ಟ ಎಂದಿದ್ದಾರೆ.
ಭಾರತದ ಫೇವರಿಟ್ ಸಿನಿಮಾಗಳು ಯಾವವು ಎಂದು ಅವರಿಗೆ ಕೇಳಲಾಗಿತ್ತು. ಈ ವೇಳೆ ವಿ ಹಾ ಜೂನ್ ಅವರು ‘3 ಈಡಿಯಟ್ಸ್’, ‘ಕಿಲ್’ ಹಾಗೂ ‘ಕೆಜಿಎಫ್’ ಚಿತ್ರವನ್ನು ಹೇಳಿದ್ದಾರೆ. ಅವರಿಗೆ ಭಾರತದ ಸಿನಿಮಾಗಳಲ್ಲಿ ನಟಿಸೋ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ವಿ ಹಾ ಜೂನ್ ಅವರಿಗೆ ಈಗಿನ್ನೂ 33 ವರ್ಷ. ಅವರು ಕೊರಿಯಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
ವಿ ಹಾ ಜೂನ್ ಅವರು 2012ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ, ಟಿವಿ ಸೀರಿಸ್ ಹಾಗೂ ವೆಬ್ ಸೀರಿಸ್ಗಳಲ್ಲಿ ವಿ ಹಾ ಜೂನ್ ಅವರು ನಟಿಸಿದ್ದಾರೆ. ‘ಸ್ಕ್ವಿಡ್ ಗೇಮ್’ ಸರಣಿಯಲ್ಲಿ ಪೊಲೀಸ್ ಅಧಿಕಾರಿ ಆಗಿ ವಿ ಹಾ ಜೂನ್ ನಟಿಸಿದ್ದಾರೆ. ಸ್ಕ್ವಿಡ್ ಗೇಮ್ ನಡೆಯುವ ಜಾಗ ಯಾವುದು ಎಂದು ಪತ್ತೆ ಹಚ್ಚಲು ತೆರಳೋ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ, ಇಡೀ ಸೀರಿಸ್ನಲ್ಲಿ ಅವರಷ್ಟು ವೇಸ್ಟ್ ಪಾತ್ರ ಮತ್ತೊಂದು ಇಲ್ಲ ಎಂಬುದು ಅನೇಕರ ಅಭಿಪ್ರಾಯ.