ಬೆಂಗಳೂರು : ಶಾಲಾ ಬಸ್ನಲ್ಲಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮಾಲೀಕ ಬಸ್ ಮಾರಲು ತನ್ನ ಮನೆ ಪಕ್ಕದ ಜಾಗದಲ್ಲಿ ಸಮಾರು ಮೂರು ನಾಲ್ಕು ತಿಂಗಳಿಂದ ನಿಲ್ಲಿಸಿದ್ದರು. ಹೀಗಾಗಿ ಅದು ಪಡ್ಡೆ ಹುಡುಗರ ಅಡ್ಡೆಯಾಗಿತ್ತು. ಎಷ್ಟು ಬಾರಿ ಬಸ್ ಡೋರ್ ಲಾಕ್ ಮಾಡಿದ್ದರು, ಹುಡುಗರು ಒಳಗೆ ಹೋಗಿ ಕೂರುತ್ತಿದ್ದರು.
ಹೀಗಿರುವಾಗ ಅವರ ನಡುವೆಯೇ ಗಲಾಟೆ ಆಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸುಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸದ್ಯ ರಾಮಮೂರ್ತಿ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
For More Updates Join our WhatsApp Group :
