ಬೆಂಗಳೂರು ಪೊಲೀಸರ ಭರ್ಜರಿ ಬೇಟೆ : ಉತ್ತರ ಪ್ರದೇಶದಲ್ಲಿ ಕುಖ್ಯಾತ ದರೋಡೆಕೋರ ಅರೆಸ್ಟ್!

IPL ಟಿಕೆಟ್ ಮಾರಾಟ ದಂಧೆ: ಇಬ್ಬರು ಪೊಲೀಸರು ಸೇರಿದಂತೆ ನಾಲ್ವರ ಬಂಧನ

ಲಖನೌ : ದೇಶಾದ್ಯಂತ ಹಲವು ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ನಟೋರಿಯಸ್ ಕಳ್ಳನನ್ನು ಬೆಂಗಳೂರಿನ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನ ಕೋಡಿಗೆಹಳ್ಳಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳನನ್ನು ಉತ್ತರಪ್ರದೇಶದ ಮುರ್ದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಫಹೀಮ್ ಅಲಿಯಾಸ್ ಎಟಿಎಂ ನನ್ನು ಬಂಧಿಸಿದ್ದು, ಅಲ್ಲಿದ್ದ ಆತನ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗಿದೆ. ಸದ್ಯ ಪೊಲೀಸರು ಆರೋಪಿ ಫಹಿಮ್ ನನ್ನು ಬಾಡಿ ವಾರೆಂಟ್ ಪಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಫಹೀಮ್ ದೇಶಾದ್ಯಂತ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕರ್ನಾಟಕದ ಬೆಂಗಳೂರು, ಉತ್ತರ ಪ್ರದೇಶದ ವಿವಿಧ ನಗರ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದ.

Leave a Reply

Your email address will not be published. Required fields are marked *