ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಅನಧಿಕೃತ ಆಪ್ಟಿಕಲ್ ಫೈಬರ್ , ಡೇಟಾ ಮತ್ತು ಡಿಶ್ ಕೇಬಲ್‌ಗಳನ್ನು ಜುಲೈ 8 ರೊಳಗೆ ತೆಗೆದುಹಾಕುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ-ಬೆಸ್ಕಾಂ ಸೇವಾ ಪೂರೈಕೆದಾರರಿಗೆ ಗಡುವು ನಿಗದಿಪಡಿಸಿದೆ.
ಸೇವಾ ಪೂರೈಕೆದಾರರು ನಿಗದಿತ ಸಮಯದೊಳಗೆ ತೆಗೆದುಹಾಕುವಲ್ಲಿ ವಿಫಲವಾದರೆ ಎಲ್ಲಾ ಅಕ್ರಮ ಆಪ್ಟಿಕಲ್ ಫೈಬರ್ ಕೇಬಲ್‌ಗಳು (OFC ಗಳು), ಡೇಟಾ ಕೇಬಲ್‌ಗಳು ಮತ್ತು ಡಿಶ್ ಕೇಬಲ್‌ಗಳನ್ನು ತೆಗೆದುಹಾಕುವುದಾಗಿ ಬೆಸ್ಕಾಂ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ರಮ ಕೇಬಲ್‌ಗಳಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಆಯಾ ಸೇವಾ ಪೂರೈಕೆದಾರರೇ ಹೊಣೆಯಾಗುತ್ತಾರೆ ಮತ್ತು ತಪ್ಪಾದ ಒಎಫ್‌ಸಿ, ಡೇಟಾ ಮತ್ತು ಡಿಶ್ ಕೇಬಲ್ ಆಪರೇಟರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ