ಶಬರಿಮಲೆ ದೇವಸ್ಥಾನದ ಮುಂಭಾಗದಲ್ಲಿರುವ ದ್ವಾರಪಾಲಕರ ಪ್ರತಿಮೆಯಲ್ಲಿನ ಚಿನ್ನದ ಲೇಪನ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಂಡಿದೆ. ಇದೀಗ ಎಸ್ಐಟಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ದೇವಾಲಯದಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸುತ್ತಿದೆ. ಗರ್ಭಗುಡಿಯ ದ್ವಾರಪಾಲಕ ಶಿಲ್ಪ ಮತ್ತು ಚಿನ್ನದಿಂದ ಆವೃತವಾದ ಮರದ ಬಾಗಿಲಿನ ರಚನೆಯಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.
ಈ ಬಗ್ಗೆ ವಿಡಿಯೋವೊಂದು ಎಎನ್ಐ ಹಂಚಿಕೊಂಡಿದೆ. ತನಿಖೆಯ ಭಾಗವಾಗಿ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಅವರನ್ನು ಈಗಾಗಲೇ ಎಸ್ಐಟಿ ವಶಪಡೆದುಕೊಂಡಿದ್ದು ತನಿಖೆಯನ್ನು ನಡೆಸುತ್ತಿದೆ. ಶಬರಿಮಲೆ ದೇವಸ್ಥಾನದ ಮುಂಭಾಗದಲ್ಲಿರುವ ದ್ವಾರಪಾಲಕರ ಪ್ರತಿಮೆಗೆಯಲ್ಲಿದ್ದ ಬರೋಬ್ಬರಿ 4.54 ಕೆಜಿ ಲೇಪನ ಕಾಣೆಯಾಗಿದೆ.
For More Updates Join our WhatsApp Group :
