ದೇವನಹಳ್ಳಿ ವಸತಿ ಶಾಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!

ದೇವನಹಳ್ಳಿ ವಸತಿ ಶಾಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!

ಅನುಮತಿಯೇ ಇಲ್ಲದೆ ಬಾಲಕಿಯರ ಹಾಸ್ಟೆಲ್?

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿನ ವಸತಿ ಶಾಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಆರೋಪಿ ಧನಂಜಯ್ ಬಾಲಕರ ಹಾಸ್ಟೆಲ್‌ಗೆ ಮಾತ್ರ ಅನುಮತಿ ಪಡೆದಿದ್ದರೂ, ಬಾಲಕಿಯರ ವಸತಿ ವ್ಯವಸ್ಥೆಯನ್ನು ಅನುಮತಿ ಇಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ.

ಬಾಲಕರ ವಸತಿ ಶಾಲೆಯ ಪರವಾನಗಿಯನ್ನೂ ನವೀಕರಿಸಿಲ್ಲ

ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಬೆನ್ನಲ್ಲೇ ಧನಂಜಯ್​ನ ಮತ್ತೊಂದು ಅವ್ಯವಹಾರ ಬಟಾಬಯಲಾಗಿದೆ. ಬಾಲಕ ಮತ್ತು ಬಾಲಕಿಯರ ವಸತಿ ಶಾಲೆ ನಡೆಸುತ್ತಿದ್ದ ಧನಂಜಯ್ ಕೇವಲ ಬಾಲಕರ ಶಾಲೆಗೆ ಮಾತ್ರ ಅನುಮತಿ ಪಡೆದಿದ್ದು, ಬಾಲಕಿಯರ ವಸತಿ ಶಾಲೆ ನಡೆಸಲು ಪರವಾನಗಿ ಪಡೆದಿರಲಿಲ್ಲ ಎಂಬುದು ತಿಳಿದು ಬಂದಿದೆ. ಇದಲ್ಲದೆ ಕಳೆದ ವರ್ಷದಿಂದ ಬಾಲಕರ ಹಾಸ್ಟೆಲ್ ಲೈಸನ್ಸ್‌ ನವೀಕರಣವೂ ಮಾಡಿಸದ ಆಡಳಿತ ಮಂಡಳಿ ವಸತಿ ಶಾಲೆ ನಡೆಸುತ್ತಿತ್ತು ಎನ್ನಲಾಗಿದೆ.

ದೌರ್ಜನ್ಯದ ಘಟನೆ ಬಹಿರಂಗವಾದ ನಂತರವೇ ಹಾಸ್ಟೆಲ್ ಕಾರ್ಯಾಚರಣೆ ಕುರಿತು ಗಮನಕ್ಕೆ ಬಂದಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ವಸತಿ ಶಾಲೆ ನಡೆಸಲು ಸಮಾಜ ಕಲ್ಯಾಣ ಇಲಾಖೆಯ ಅನುಮತಿ ಅಗತ್ಯವೆಂದು ಡಿಡಿಪಿಐ ಸ್ಪಷ್ಟಪಡಿಸಿದ್ದರೆ, ಖಾಸಗಿ ಶಾಲೆಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸಮಾಜ ಕಲ್ಯಾಣ ಇಲಾಖೆ ಹೇಳಿದೆ. ಇದರಿಂದ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಹಾಗೂ ನಿರ್ಲಕ್ಷ್ಯ ಬಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *