ಕಿಚ್ಚ ಸಾರಥ್ಯದಲ್ಲಿ ಬಿಗ್ ಬಾಸ್ ಸೀಸನ್ 11 : ಯಾವಾಗ ಪ್ರಾರಂಭ..? ಯಾರು ಯಾರು ಇರ್ತಾರೆ..?

ಕಿಚ್ಚ ಸಾರಥ್ಯದಲ್ಲಿ ಬಿಗ್ ಬಾಸ್ ಸೀಸನ್ 11 : ಯಾವಾಗ ಪ್ರಾರಂಭ..? ಯಾರು ಯಾರು ಇರ್ತಾರೆ..?

ಸೆಪ್ಟಂಬರ ಶುರುವಾಗುವುದೆ ತಡ ಕನ್ನಡದ ಅತಿ ಹೆಚ್ಚು ಟಿಆರ್ಪಿ ಹೊಂದಿರುವ ಬಿಗ್ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗುವುದರ ಬಗ್ಗೆ, ಪ್ರಾರಂಭವಾಗುವ ದಿನಾಂಕ, ನಿರೂಪಕರು ಯಾರು, ಈ ಬಾರಿ ಯರ್-ಯಾರು ಭಾಗವಹಿಸುತ್ತಿದ್ದಾರೆ ಎಂಬುದರ ಕುರಿತು ಅತಿ ಹೆಚ್ಚು ಚರ್ಚೆಯಲ್ಲಿರುತ್ತದೆ.

ಅದೇ ರಿತಿ 10 ನೇ ಸೀಸನಿನ್ನ ಯಶಸ್ಸಿನ ಬಳಿಕ 11ನೇ ಸೀಸನ್ ಇದೇ ಸೆಪ್ಟೆಂರ್ 29 ರಿಂದ ಶುರುವಾಗುತ್ತಿದ್ದು, ಎಲ್ಲಾ ವಿಕ್ಷಕರು ಕುತುಹಲದಿಂದ ಕಾಯುತ್ತಿದ್ದಾರೆ. ಇದರ ಜೋತೆಗೆ ಸುದೇಪ್ ಅವರು ಈ ಬಾರಿ ನಿರೂಪಣೆ ಮಾಡುವುದಿಲ್ಲ ಆ್ಯಂಕರ್ ಬದಲಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಸುದೀಪ್ ಅವರನ್ನ ಬಿಟ್ಟು ಬೇರೆ ನಟರನ್ನು ನಿರೂಪಕರ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯಸ್ ಸಿಕ್ಕಿದೆ .

ಈಗ ಹೊಸ ಸೀಸನ್ಗೂ ಕಿಚ್ಚ ಸುದೀಪ್ ಅವರೇ ಸಾರಥ್ಯ ವಹಿಸಿಕೊಂಡಿದ್ದಾರೆ. ಈ ಬಾರಿಯು ಕೂಡ ಕಿಚ್ಚ ಸುದೀಪ್ ಅವರೇ ಆ್ಯಂಕರ್ ಆಗಿ ಮುಂದುವರಿಯಲಿದ್ದಾರೆ.

ಕಳೆದ ಹತ್ತು ವರ್ಷದಿಂದ ಅಂದ್ರೆ ಹತ್ತು ಸೀಸನ್ಗಳನ್ನು ಸುದೀಪ್ ಅವರೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಅವರಿಂದಾಗಿ ಎಲ್ಲ 10 ಸೀಸನ್ಗಳಿಗೆ ಸ್ಟಾರ್ ಮೆರುಗು ಸಿಕ್ಕಿದೆ. ಸುದೀಪ್ ಬದಲು ಬೇರೆ ನಟ ನಿರೂಪಣೆ ಮಾಡುತ್ತಾರೆ ಎಂಬುದು ಅಭಿಮಾನಿಗಳಿಗೆ ಸ್ವಿಕರಿಸಲು ಕಷ್ಟವಾಗಿತ್ತು. ಸಧ್ಯ ಈ ಅನುಮಾನ ದೂರ ಮಾಡಲು ಕಲರ್ಸ್ ಕನ್ನಡ ಟಿವಿಯು ಹೊಸ ಪ್ರೋಮೋವನ್ನ ಬಿಡುಗಡೆ ಮಾಡಲಾಗಿದೆ.

“ಗಿಚ್ಚಿ ಗಿಲಿಗಿಲಿ 3” ಗ್ರ್ಯಂಡ್ ಫಿನಾಲೆಯ ವೇದಿಕೆಯಲ್ಲಿ ‘ಬಿಗ್ ಬಾಸ ಕನ್ನಡ ಸೀಸನ್ 11’ ರ ಹೊಸ ಪ್ರೋಮೋ ಬಿಡುಗಡೆಯಾಗಿದೆ. “10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ. ಇದು ಹೊಸ ಅಧ್ಯಾಯ” ಎಂದು ಸುದೀಪ್ ಅವರು ಖಡಕ್ ಆಗಿ ಡೈಲಾಗ ಹೊಡೆದಿದ್ದಾರೆ. ಇನ್ನು ಈ ಪ್ರೋಮೋ ನೋಡಿ ಕಿಚ್ಚಾ ಅಭಿಮಾನಿಗಳಿಗೆ ಖುಷಿಯಾಗಿದೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ಅನೇಕ ವ್ಯಕ್ತಿಗಳ ಹೆಸರು ಕೇಳಿಬರುತ್ತಿದೆ. ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಯೋಳಗೆ ಸ್ಪರ್ಧಿಗಳಾಗಿ ಕಾಲಿಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ‘ಕಲರ್ಸ್ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ ಮೂಲಕ ಈ ಶೋ ಪ್ರಸಾರ ಆಗಲಿದೆ. ಸೆ.29ರ ಭಾನುವಾರ ಗ್ರ್ಯಾಂಡ್ ಓಪನಿಂಗ್ ಆಗಲಿದ್ದು ಎಲ್ಲರು ಕುತುಹಲದಿಂದ ಕಯುತ್ತಿದ್ದಾರೆ.

Leave a Reply

Your email address will not be published. Required fields are marked *