BJP-JDS ಮೈತ್ರಿ ಗೊಂದಲ: ಶೀಘ್ರ ಸಮನ್ವಯ ಸಭೆ

BJP-JDS ಮೈತ್ರಿ ಗೊಂದಲ: ಶೀಘ್ರ ಸಮನ್ವಯ ಸಭೆ

ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ನಾಯಕರ ತೀರ್ಮಾನ.

ಬೆಂಗಳೂರು – ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದ ಕೆಲವು ಗೊಂದಲಗಳನ್ನು ಬಗೆಹರಿಸಲು ಶೀಘ್ರವೇ ಮೈತ್ರಿ ನಾಯಕರ ಸಮನ್ವಯ ಸಭೆ ನಡೆಯಲಿದೆ. ಈ ಸಭೆಗೆ ಹೆಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್, ಮತ್ತು ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿರುತ್ತಾರೆ.

ಉಭಯ ಪಕ್ಷಗಳ ನಾಯಕರು ಒಂದೊಂದು ರೀತಿ ಹೇಳಿಕೆ ನೀಡುತ್ತಿರೋದು ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗುವ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯ ಸಂಸ್ಥೆ ಚುನಾವಣೆಯ ಮೇಲೂ ಇದು ಪರಿಣಾಮ ಬೀರಬುದಾದ ಹಿನ್ನೆಲೆ ಮೈತ್ರಿ ನಾಯಕರಲ್ಲಿ ಏನೇ ಮನಸ್ತಾಪ, ಗೊಂದಲಗಳಿದ್ದರೂ ಅದನ್ನು ಬಗೆಹರಿಸಲು ನಾಯಕರು ತೀರ್ಮಾನಿಸಿದ್ದಾರೆ. ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಹೊಂದಾಣಿಕೆ ವಿಚಾರ ಸಂಬಂಧ ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಆರ್​. ಅಶೋಕ್​​, ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಜತೆ ಮಾತಾಡಿದ್ದು, ಸುಲಲಿತವಾಗಿ ಜೆಡಿಎಸ್ ಜತೆ ಹೊಂದಾಣಿಕೆ ಆಗಲಿದೆ. ಆದಷ್ಟು ಬೇಗ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಮ್ಮ‌ ನಡುವೆ ಯಾವುದೇ ದೊಡ್ಡ ದೊಡ್ಡ ಸಮಸ್ಯೆಗಳು ಇಲ್ಲ. ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಹೈಕಮಾಂಡ್ ‌ತೀರ್ಮಾನ ಅಂತಿಮ ಎಂದು ಹೇಳಿದ್ದರು.

ಅತ್ತ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಕೂಡ ಈ ಬಗ್ಗೆ ಅದಾಗಲೇ ಮಾತನಾಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಮತ್ತು ಲೋಪಗಳಿಲ್ಲ. ವೈಯಕ್ತಿಕವಾಗಿ ಮಾತಾಡುವುದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ. ರಾಷ್ಟ್ರಮಟ್ಟದಲ್ಲಿ ನಾವು NDA ಸೇರಿರುವುದರಿಂದ ಬೇರೆ ವಿಚಾರ ಬರೋದಿಲ್ಲ. ನಾನು ನೂರಾರು ಬಾರಿ ಹೇಳಿದ್ದೀನಿ, ಜನ ಮುಂದಿನ ಸಿಎಂ ಎಂದು ಕೂಗ್ತಾರೆ. ಜನ ಮುಂದಿನ ಸಿಎಂ ಎಂದು ಕೂಗ್ತಾರೆಂದು ಭ್ರಮೆಯಲ್ಲಿ ಹೋಗಬಾರದು. ಜನ ನಮ್ಮ ಮೇಲಿನ ಪ್ರೀತಿಯಿಂದ ಮಾತಾಡ್ತಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಅನ್ನುವಂತಾಗಬಾರದು. ಸಿಎಂ ಆಗುತ್ತೇನೆ ಎಂದು ನಾನು ಕನಸು ಕಾಣಲು ಆಗುತ್ತಾ? ನಾನು 2 ಬಾರಿ ಸಿಎಂ ಆಗಿದ್ದೆ. ಯಾರ ಹಣೆಯಲ್ಲಿ ಏನೇನ್ ಬರೆದಿರುತ್ತೋ ಹಾಗೆಯೇ ಆಗುತ್ತದೆ. ನನ್ನ ಮೊದಲ ಆದ್ಯತೆ ರಾಜ್ಯದಲ್ಲಿರುವ ಕೆಟ್ಟ ಸರ್ಕಾರವನ್ನು ತೆಗೆಯುವುದು. ಕೆಟ್ಟ ಸರ್ಕಾರ ತೆಗೆಯಲು ಬಿಜೆಪಿ, ಜೆಡಿಎಸ್ ಮೈತ್ರಿ ಮುಂದುವರಿಯಬೇಕು ಎಂದು ಹೇಳಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *