ತುಮಕೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, “ರಾಜಣ್ಣ ಈಗಾಗಲೇ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ, ನೂರಕ್ಕೆ ನೂರು ಬಿಜೆಪಿ ಸೇರುತ್ತಾರೆ” ಎಂದು ಬಾಂಬ್ ಸಿಡಿಸಿದ್ದರು. ಆದರೆ, ಈ ಹೇಳಿಕೆಗೆ ಸ್ವತಃ ರಾಜಣ್ಣ ಖಡಕ್ ಉತ್ತರ ನೀಡಿದ್ದು, “ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಯಾರು ಹೇಳಿದ್ದು? ಬಾಲಕೃಷ್ಣ ಬೇಕಾದ್ರೆ ಬ್ರೈನ್ ಮ್ಯಾಪಿಂಗ್ ಮಾಡಿಸಿಕೊಳ್ಳಲಿ” ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ರಾಜಣ್ಣ ಸ್ಪಷ್ಟನೆ:“ಕಾಂಗ್ರೆಸ್ ನನಗೆ ಯಾವ ಮೋಸವೂ ಮಾಡಿಲ್ಲ. ನಾನು ಪಕ್ಷ ಬಿಡೋ ಪ್ರಶ್ನೆಯೇ ಇಲ್ಲ.”“ಬಿಜೆಪಿಗೆ ಸೇರ್ಪಡೆ ಆಗುತ್ತೇನೆ ಎನ್ನುವುದು ಸುಳ್ಳು. ನನ್ನ ಬದ್ಧತೆ ಕಾಂಗ್ರೆಸ್‌ನಲ್ಲೇ ಇದೆ.”
ಬಾಲಕೃಷ್ಣ ಆರೋಪ:“ರಾಜಣ್ಣ ಬಿಜೆಪಿ ನಾಯಕರ ಜೊತೆ ಈಗಾಗಲೇ ಸಂಪರ್ಕದಲ್ಲಿದ್ದಾರೆ.”“ಸರ್ಕಾರ ಕುಸಿದಿದ್ದರೆ ಇಷ್ಟೊತ್ತಿಗಾಗಲೇ ಬಿಜೆಪಿ ಸೇರ್ಪಡೆ ಆಗಿರುತ್ತಿದ್ದರು.”ಈ ಆರೋಪ-ಪ್ರತ್ಯಾರೋಪಗಳಿಂದ ತುಮಕೂರು ಕಾಂಗ್ರೆಸ್ ರಾಜಕಾರಣದಲ್ಲಿ ದೊಡ್ಡ ಸಂಚಲನ ಉಂಟಾಗಿದೆ.
For More Updates Join our WhatsApp Group :

