ಬೆಂಗಳೂರು: ಯೆಲ್ಲೋ ಲೈನ್ ಯಶಸ್ವಿಯಾಗಿ ಲೋಕಾರ್ಪಣೆಯಾದ ಬೆನ್ನಲ್ಲೇ, ಬೆಂಗಳೂರಿನ ಬ್ಲೂ ಲೈನ್ ಮೆಟ್ರೋ ಯೋಜನೆಯೂ ವೇಗ ಪಡೆದುಕೊಂಡಿದೆ. BMRCL (ಬೆಂಗಳೂರು ಮೆಟ್ರೋ) ಬ್ಲೂ ಲೈನ್ ಕಾಮಗಾರಿ ಪೂರ್ಣಗೊಳಿಸಲು ನಿಗದಿತ ಡೆಡ್ಲೈನ್ ಘೋಷಿಸಿದೆ.
ಡೆಡ್ಲೈನ್‌ಗಳು ಹೀಗಿವೆ:
- ಸೆಂಟ್ರಲ್ ಸಿಲ್ಕ್ ಬೋರ್ಡ್ ಟು ಕೆ.ಆರ್. ಪುರಂ (2A)
2026ರ ಸೆಪ್ಟೆಂಬರ್ ಒಳಗೆ ಕಾರ್ಯಾಚರಣೆ - ಕೆ.ಆರ್. ಪುರಂ ಟು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (2B)
2027ರ ಜೂನ್ ಅಥವಾ ಜುಲೈ ಒಳಗೆ ಮೆಟ್ರೋ ಸಂಚಾರ ಪ್ರಾರಂಭ
ಕಾಮಗಾರಿ ಸ್ಥಿತಿ & ಮಾರ್ಗ ವಿವರ:
- ಮೆಟ್ರೋ ದಾರಿ: ಸೆಂಟ್ರಲ್ ಸಿಲ್ಕ್ ಬೋರ್ಡ್ → ವಿಮಾನ ನಿಲ್ದಾಣ (ಒಟ್ಟು 58.19 ಕಿಮೀ)
- ಎಲ್ಲಾ ಸ್ಟೇಷನ್ಗಳು ಎಲಿವೇಟೆಡ್
ಮಾರ್ಗ ವಿಭಜನೆ:
- 2A ಸೆಗ್ಮೆಂಟ್: ಸಿಲ್ಕ್ ಬೋರ್ಡ್ → ಕೆಆರ್ ಪುರಂ (19.75 ಕಿಮೀ)
13 ಮೆಟ್ರೋ ಸ್ಟೇಷನ್‌ಗಳು - 2B ಸೆಗ್ಮೆಂಟ್: ಕೆಆರ್ ಪುರಂ → ಏರ್‌ಪೋರ್ಟ್ (38.44 ಕಿಮೀ)
17 ಮೆಟ್ರೋ ಸ್ಟೇಷನ್‌ಗಳು
ಡ್ರೈವರ್ಲೆಸ್ ಟ್ರೈನ್ ಗಳ ಆರ್ಡರ್
- ಬ್ಲೂ ಲೈನ್ ಮಾರ್ಗಕ್ಕೆ 38 ಡ್ರೈವರ್ಲೆಸ್ ಮೆಟ್ರೋ ರೈಲುಗಳಿಗೆ ಆರ್ಡರ್ ನೀಡಲಾಗಿದೆ.
- ಇವುಗಳಲ್ಲಿ ಕೆಲವು 3ನೇ ಹಂತದ ಆರೆಂಜ್ ಲೈನ್ಕ್ಕು ಸಹ ಬಳಸಲಾಗುತ್ತದೆ.
- ಪ್ರಮುಖ ಇಂಟರ್‌ಚೇಂಜ್ ಸ್ಟೇಷನ್ ಕೆಂಪಾಪುರದಲ್ಲಿ ನಿರ್ಮಾಣವಾಗಲಿದೆ.
ಐಟಿ ಪಾರ್ಕ್‌ಗಳಿಗೆ ಬ್ಲೂ ಲೈನ್ “ಜೀವನ ರೇಖೆ”
ಈ ಬ್ಲೂ ಲೈನ್ ಮಾರ್ಗವು ಸಾವಿರಾರು ಐಟಿ ಉದ್ಯೋಗಿಗಳ ದಿನಸಿ ಪ್ರಯಾಣವನ್ನು ಸುಗಮಗೊಳಿಸುವಂತಿದ್ದು, ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ತರಲಿದೆ ಎಂಬ ನಿರೀಕ್ಷೆ ಇದೆ.
