ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಮೊದಲ ಬಾರಿಗೆ ಅಂತರಜಿಲ್ಲೆ ಸಂಪರ್ಕದತ್ತ ಹೆಜ್ಜೆಯಿಡುತ್ತಿದ್ದು, 59.6 ಕಿಮೀ ಹಸಿರು ಮಾರ್ಗ ವಿಸ್ತರಣೆಯ ವಿಸ್ತ್ರತ ಯೋಜನಾ ವರದಿ (DPR) ತಯಾರಿಸಲು ಬಿಎಂಆರ್‌ಸಿಎಲ್ ಬಿಡ್ ಆಹ್ವಾನಿಸಿದೆ. ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಿರುವ ಈ ಯೋಜನೆಗೆ ನೋಂದಾಯಿಸಿಕೊಳ್ಳುವ ಕಂಪನಿಗಳು 4.5 ಲಕ್ಷ ರೂ ಠೇವಣಿ ಇಡಬೇಕಿದೆ. ಬಿಡ್ ಸಲ್ಲಿಸಲು ನವೆಂಬರ್ 20ರವರೆಗೆ ಗಡುವಿದ್ದು, ನವೆಂಬರ್ 21ರಂದು ಟೆಂಡರ್ ತೆರೆಯುವ ಸಾಧ್ಯತೆಯಿದೆ. ಡಿಪಿಆರ್ ತಯಾರಿಕೆಗೆ ಐದು ತಿಂಗಳ ಅವಧಿ ಕೊಡಲಾಗಿದೆ.
ಪ್ರತೀ ಗಂಟೆಗೆ ಸುಮಾರು 15 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ
ಮಾದಾವರ (ಬಿಐಇಸಿ)–ತುಮಕೂರು ಮಾರ್ಗವು ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗಲಿದ್ದು, ಯೋಜನೆಯ ಮೊದಲ ಹಂತಕ್ಕೆ 20,649 ಕೋಟಿ ರೂ.ವೆಚ್ಚವಾಗುವ ಅಂದಾಜು ಇದೆ. ಈ ಯೋಜನೆ 2024–25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಪ್ರಮುಖ ಸಾರಿಗೆ ಯೋಜನೆಗಳಲ್ಲಿ ಒಂದಾಗಿದೆ. ಮೆಟ್ರೋ ಲೈನ್ ವಿಸ್ತರಣೆಯಾದಲ್ಲಿ ಒಂದು ದಿಕ್ಕಿನಲ್ಲಿ ಪ್ರತೀ ಗಂಟೆಗೆ ಸುಮಾರು 15 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಮಾದವಾರದ ಬಿಐಇಸಿಯಿಂದ ತುಮಕೂರುವರೆಗೆ ಪ್ರಮುಖವಾಗಿ 26 ಮೆಟ್ರೋ ನಿಲ್ದಾಣಗಳನ್ನು ಬರಲಿದ್ದು, ಎಲ್ಲವೂ ಎಲೆವೆಟೆಡ್ ಮಾದರಿಯ ನಿಲ್ದಾಣಗಳಾಗಿವೆ.
ಬೆಂಗಳೂರು – ತುಮಕೂರು ಮೆಟ್ರೋ ಮಾರ್ಗದ ಸಂಭಾವ್ಯ ನಿಲ್ದಾಣಗಳು
- ಮಾದಾವರ
- ಮಾಕಳಿ
- ದಾಸನಪುರ
- ನೆಲಮಂಗಲ
- ವೀವರ್ ಕಾಲೋನಿ
- ನೆಲಮಂಗಲ ವಿಶ್ವೇಶ್ವರಪುರ
- ನೆಲಮಂಗಲ ಟೋಲ್‌ಗೇಟ್
- ಬೂದಿಹಾಳ್
- ಟಿ. ಬೇಗೂರು
- ತಿಪ್ಪಗೊಂಡನಹಳ್ಳಿ
- ಕುಲವನಹಳ್ಳಿ
- ಮಹಿಮಾಪುರ
- ಬಿಲ್ಲನ್‌ಕೋಟೆ
- ಸೋಂಪುರ ಕೈಗಾರಿಕಾ ಪ್ರದೇಶ
- ದಾಬಸ್‌ಪೇಟೆ
- ನಲ್ಲಾಯನಪಾಳ್ಯ
- ಚಿಕ್ಕಹಳ್ಳಿ
- ಹಿರೇಹಳ್ಳಿ ಕೈಗಾರಿಕಾ ಪ್ರದೇಶ
- ಪಂಡಿತನಹಳ್ಳಿ
- ಕ್ಯಾತ್ಸಂದ್ರ ಬೈಪಾಸ್
- ಕ್ಯಾತ್ಸಂದ್ರ
- ಎಸ್‌ಐಟಿ
- ತುಮಕೂರು ಬಸ್ ನಿಲ್ದಾಣ
- ಟೂಡಾ ಲೇಔಟ್
- ನಾಗಣ್ಣ ಪಾಳ್ಯ
- ಶಿರಾ ಗೇಟ್
For More Updates Join our WhatsApp Group :
