ಯುವತಿಯೊಂದಿಗೆ BMTC ಕಂಡಕ್ಟರ್ ಅನುಚಿತ ವರ್ತನೆ

ಯುವತಿಯೊಂದಿಗೆ ಕಂಡಕ್ಟರ್ ಅನುಚಿತ ವರ್ತನೆ

ಯುವತಿಯೊಂದಿಗೆ ಕಂಡಕ್ಟರ್ ಅನುಚಿತ ವರ್ತನೆ

ಬೆಂಗಳೂರು : ಬಿಎಂಟಿಸಿ ಬಸ್‌ನಲ್ಲಿ ಮತ್ತೊಂದು ಕಿರುಕುಳ ಪ್ರಕರಣ ಸಂಭವಿಸಿದೆ, ಚಲಿಸುತ್ತಿರುವ ಬಸ್‌ನಲ್ಲಿ ಬಸ್ ನಿರ್ವಾಹಕನಿಂದ ಯುವತಿಗೆ ಕಿರುಕುಳ ನೀಡುತ್ತಿರುವ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗಿದೆ

ಬಿಎಂಟಿಸಿ ಕಂಡಕ್ಟರ್​ವೊಬ್ಬರು (BMTC Conductor) ಯುವತಿಯ ಸೀಟ್​​ಗೆ ಅಂಟಿಕೊಂಡಂತೆ ಕೂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಬಸ್ ಸಂಖ್ಯೆ KA41D2500ಯ ಬಸ್ ನಲ್ಲಿ ನಿರ್ವಾಹಕ ಉದ್ದೇಶಪೂರ್ವಕವಾಗಿಯೇ ಯುವತಿ ಕುಳಿತಿದ್ದ ಸೀಟಿನ ಹ್ಯಾಂಡಲ್ ಮೇಲೆ ಕುಳಿತಿದ್ದಾರೆ.

ಬಸ್ ಚಲಿಸುತ್ತಿದ್ದಾಗ ನಿರ್ವಾಹಕ ಹಿಂದಿನ ಮತ್ತು ಮುನ್ನಡೆಯಾಗಿ ಚಲಿಸುತ್ತಿದ್ದು, ಇದರಿಂದಾಗಿ ದ seatನಲ್ಲಿ ಕುಳಿತುಕೊಂಡ ಯುವತಿಗೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವುದನ್ನು ವಿಡಿಯೋ ಸೆರೆಯಾಗಿದೆ

ಈ ಬಗ್ಗೆ @karnatakaportf ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ, ಕಂಡಕ್ಟರ್ ದಣಿದು ಸೀಟ್ ಹ್ಯಾಂಡಲ್ ಮೇಲೆ ಕುಳಿತಿದ್ದರೂ ಅವರಿಗೆ ಯುವತಿಯ ಸೀಟ್ ಆಗಬೇಕೆಂದೇನೂ ಇಲ್ಲ.. ಬೇರೆ ಸೀಟ್ ನಲ್ಲಿ ಕುಳಿತುಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಇದು ಅವರ ಅವರ ನಡವಳಿಕೆಯನ್ನು ತೋರಿಸುತ್ತದೆ. ಇಂತಹವರ ವಿರುದ್ಧ ಸರಿಯಾದ ಕ್ರಮವಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *