ಬೆಂಗಳೂರು : ಕರ್ನಾಟಕದ ಹೆಮ್ಮೆಯ ನಂದಿನಿ ಹಾಲು ಮೊಸರು ತುಪ್ಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರುತಿಸಿಕೊಂಡಿವೆ. ತಿರುಪತಿ ಲಡ್ಡು ತಯಾರಿಕೆಯಲ್ಲಿಯೂ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ನಂದಿನಿ ಮಳಿಗೆಗಳಲ್ಲಿ ನಂದಿನಿ ಉತ್ಪನಗಳ ಜೊತೆ ಬೇರೆ ಉತ್ಪನಗಳನ್ನೂ ಮಾರಾಟ ಮಾಡುತ್ತಿರುವುದು ತಿಳಿದುಬಂದ ಹಿನ್ನೆಲೆ ನಂದಿನಿ ಬೂತ್ಗಳಲ್ಲಿ ಇತರ ಪ್ರಾಡೆಕ್ಟ್ ಮಾರಟಕ್ಕೆ ಕಡಿವಾಣ ಹಾಕಲು ಕೆಎಂಎಫ್ ಮುಂದಾಗಿದೆ.
ನಂದಿನಿ ಬಿಟ್ಟು ಬೇರೆ ಉತ್ಪನ್ನ ಮಾರಿದರೆ ಲೈಸೆನ್ಸ್ ರದ್ದು
ಹಲವು ನಂದಿನಿ ಬೂತ್ಗಳಲ್ಲಿ ನಂದಿನಿ ಉತ್ಪನ್ನಗಳೊಡನೆ ಬೇರೆ ಬ್ರ್ಯಾಂಡ್ಗಳ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಅರಿತ KMF, ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಬೂತ್ಗಳಲ್ಲಿ ನಂದಿನಿ ಹೊರತುಪಡಿಸಿ ಬೇರೆ ಪ್ರಾಡಕ್ಟ್ ಮಾರಾಟ ಮಾಡುತ್ತಿದ್ದ ಮಾಲೀಕರಿಗೆ KMF ನೋಟಿಸ್ ನೀಡಲು ಹೊರಟಿದ್ದು, ಈ ಮೂಲಕ ಬೇರೆ ಬ್ರಾಂಡ್ ಮಾರುವ ಮಾಲೀಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಒಂದು ವೇಳೆ ಆದೇಶ ಮೀರಿ ಇತರ ಉತ್ಪನ್ನಗಳ ಮಾರಾಟ ಮಾಡುವುದರ ಕುರಿತು ತಿಳಿದುಬಂದಲ್ಲಿ ಬೂತ್ಗಳ ಮಾಲೀಕರ ಲೈಸೆನ್ಸ್ ರದ್ದು ಮಾಡುವುದಾಗಿ KMF ಎಂಡಿ ಶಿವಸ್ವಾಮಿ ಹೇಳಿದ್ದಾರೆ.
ಇನ್ನು ಮುಂದೆ ಬೇರೆ ಉತ್ಪನ್ನ ಮಾರಲ್ಲ ಎಂದ ಮಾರಾಟಗಾರರು
ನಂದಿನಿ ಬೂತ್ಗೆ ಅನುಮತಿ ಪಡೆದ ಕೆಲ ಮಾಲೀಕರು ನಂದಿನ ಪ್ರಾಡಕ್ಟ್ಗಳ ಜೊತೆಗೆ ಬೇರೆ ಪ್ರಾಡಕ್ಟ್ ಗಳ ತಿನಿಸು, ತಿಂಡಿ ಸೇರಿದಂತೆ ನೀರಿನ ಬಾಟಲಿಗಳನ್ನು ಮಾರಾಟ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುವ ಕೆಎಂಎಫ್ ಮೊದಲ ಹಂತದಲ್ಲಿ ನೋಟಿಸ್ ನೀಡಲಿದೆ. ಈ ನೋಟಿಸ್ ಅನ್ನು ನಿರ್ಲಕ್ಷಿಸಿದಲ್ಲಿ ಲೈಸೆನ್ಸ್ ರದ್ದು ಮಾಡಲು ಮುಂದಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾರಾಟಗಾರರು, ಬೂತ್ಗಳ ಬಾಡಿಗೆ ಹೆಚ್ಚಿರುವ ಕಾರಣ ನಾವು ಕೇವಲ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ ನಮಗೆ ನಷ್ಟವಾಗುತ್ತದೆ. ನಮಗೂ ಈಗಾಗಲೇ KMF ನೋಟಿಸ್ ನೀಡಿದೆ. ಇನ್ನು ಮುಂದೆ ಬೂತ್ನಲ್ಲಿ ಇತರೆ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂದಿದ್ದಾರೆ.
For More Updates Join our WhatsApp Group :
