ಬಂಪರ್ ಗುಡ್‌ನ್ಯೂಸ್ : ಇಂದು ಕೂಡ ಚಿನ್ನ-ಬೆಳ್ಳಿ ಬೆಲೆ ಕುಸಿತ

Gold and silver price

Gold and silver price

ಇಂದೂ ಸಹ ಮಾರುಕಟ್ಟೆಯಲ್ಲಿ ನಿನ್ನನೆಗೆ ಹೋಲಿಸಿದರೆ ಚಿನ್ನ ಹಾಗೂ ಬೆಳ್ಳಿ ಇವೆರಡರ ದರದಲ್ಲೂ ಕುಸಿತವಾಗಿದ್ದು ಆಭರಣ ಕೊಳ್ಳಬಯಸುವವರು ನಿಟ್ಟುಸಿರು ಬಿಡುವಂತಾಗಿದೆ. ಏಕೆಂದರೆ, ಕಳೆದ ಕೆಲ ಸಮಯದಿಂದ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗುತ್ತಿತ್ತು.

ಕೇವಲ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಚಿನ್ನ ಬಹು ಮೌಲ್ಯಯುತ ಸಂಪತ್ತಾಗಿದೆ. ಅಲ್ಲದೆ, ಒಂದು ದೇಶದ ಸದೃಢ ಆರ್ಥಿಕ ಆರೋಗ್ಯಕ್ಕೆ ಚಿನ್ನ ಹಾಗೂ ಬೆಳ್ಳಿ ಅಮೂಲ್ಯವಾದ ಕೊಡುಗೆ ನೀಡುತ್ತವೆ. ಚಿನ್ನ ಹೊಂದುವುದು ಕೇವಲ ವ್ಯಕ್ತಿಗಳ ವೈಯಕ್ತಿಕ ಸಂಪತ್ತನ್ನು ವೃದ್ಧಿಸುವುದಲ್ಲದೆ ರಾಷ್ಟ್ರಗಳು ಸಹ ಚಿನ್ನ ಹೊಂದುವ ಮೂಲಕ ಆರ್ಥಿಕವಾಗಿ ಹೆಚ್ಚು ಸಶಕ್ತವಾಗುತ್ತವೆ.

ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 90,700 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 90,700, ರೂ. 90,700, ರೂ. 90,700 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 90,850 ರೂ. ಆಗಿದೆ.

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 7,421 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 9,070 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 9,895 ಆಗಿದೆ.

ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 59,368 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 72,560 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 79,160 ಆಗಿದೆ.

ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 74,210 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 90,700 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 98,950.

Leave a Reply

Your email address will not be published. Required fields are marked *