ಕಲಬುರಗಿ|| ತಡರಾತ್ರಿ ಡಾಬಾಗೆ ನುಗ್ಗಿ ಮೂವರ ಬರ್ಬರ ಹ*

ಕಲಬುರಗಿ|| ತಡರಾತ್ರಿ ಡಾಬಾಗೆ ನುಗ್ಗಿ ಮೂವರ ಬರ್ಬರ ಹ*

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಪಟ್ಟಣ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ತ್ರಿಬಲ್ ಮರ್ಡರ್ನಿಂದಾಗಿ ಸ್ಥಳೀಯ ಜನರಲ್ಲಿ ಆತಂಕ ಮೂಡಿದೆ.

ಸಿದ್ಧಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಕೊಲೆಯಾದವರು ಎಂದು ಗುರುತಿಸಲಾಗಿದೆ. ಈ ಮೂವರು ಸಂಬಂಧಿಕರಾಗಿದ್ದು, ಮಂಗಳವಾರ ತಡರಾತ್ರಿ 1.30ರ ಸುಮಾರಿಗೆ ಪಟ್ಟಣ ಗ್ರಾಮದ ಬಳಿ ಇರುವ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಇವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಗೆ ಹಳೆ ದ್ವೇಷವೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಲಬುರಗಿ ಸಬ್ಅರ್ಬನ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಸಬ್ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *