ಬೆಂಗಳೂರು: ಖಾಸಗಿ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಸಿಬ್ಬಂದಿ, ಬೆಂಗಳೂರಿಗೆ ತಲುಪುತ್ತಿದ್ದಂತೆಯೇ ಆಕೆಯ ಕುಟುಂಬಸ್ಥರಿಂದ ತೀವ್ರ ಹಲ್ಲೆಗೆ ಗುರಿಯಾದ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದಾಗ, ಯುವತಿ ತನ್ನ ಮೊಬೈಲ್ ಚಾರ್ಜ್‌ಗೆ ಇಟ್ಟಿದ್ದನ್ನು ಸಿಬ್ಬಂದಿಯಿಂದ ಕೇಳಿದಾಗ, ಅವನು **“ಮುತ್ತು ಕೊಟ್ಟರೆ ಮಾತ್ರ ಮೊಬೈಲ್ ಕೊಡುತ್ತೇನೆ”ಎಂದು ಅಸಭ್ಯವಾಗಿ ಪ್ರತಿಕ್ರಿಯಿಸಿದ್ದ.
ತಕ್ಷಣವೇ ಯುವತಿ ಈ ವಿಷಯವನ್ನು ತನ್ನ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಳು. ಇದರಿಂದ ಕೋಪಗೊಂಡ ಕುಟುಂಬಸ್ಥರು, ಬಸ್ ಬೆಂಗಳೂರಿಗೆ ಬಂದ ತಕ್ಷಣ ಆ ಸಿಬ್ಬಂದಿಯನ್ನು ಎಳೆದು ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ್ದಾರೆ.
ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಸ್ ಸಿಬ್ಬಂದಿಯ ಅಸಭ್ಯ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :




