ಜುನಾಗಢದಲ್ಲಿ ಭಯಾನಕ ಘಟನೆ: 15 ವರ್ಷದ ಬಾಲಕ ಅಣ್ಣನನ್ನು ಕೊಂ* ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾ*ರ.

ಜುನಾಗಢ: ಗುಜರಾತ್ನ ಜುನಾಗಢದಲ್ಲಿ ಭಯಾನಕ ಘಟನೆ ವರದಿಯಾಗಿದೆ.15 ವರ್ಷದ ಬಾಲಕನೊಬ್ಬ ಅಣ್ಣನನ್ನು ಕೊಂದು, ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಅಕ್ಟೋಬರ್ 16ರಂದು ಈ ಜೋಡಿ ಕೊಲೆನಡೆದಿದೆ. ಸುಮಾರು ಎರಡು ವಾರಗಳ ನಂತರ ಬಿಹಾರದಲ್ಲಿರುವ ಮಹಿಳೆಯ ಕುಟುಂಬವು ಅನುಮಾನ ವ್ಯಕ್ತಪಡಿಸಿದ ನಂತರ ಬೆಳಕಿಗೆ ಬಂದಿದೆ. ಆರೋಪಿ ತನ್ನ ಅಣ್ಣನ ನಡುವೆ ಜಗಳ ಮಾಡಿದ್ದ, ಕೋಪದಲ್ಲಿ ಅಣ್ಣನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಆತ ಕುಸಿದುಬಿದ್ದ ಬಳಿಕ, ಅತ್ತಿಗೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಾಲಕ ಅಣ್ಣನಿಗೆ ಪದೇ ಪದೇ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ತಾನು ಗರ್ಭಿಣಿ ದಯವಿಟ್ಟು ಈ ಮಗುವಿಗಾಗಿಯಾದರೂ ತನ್ನನ್ನು ಬಿಟ್ಟುಬಿಡು ಎಂದು ಆಕೆ ಹೇಳಿದ್ದಕ್ಕೆ, ತನ್ನ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಬಿಡುತ್ತೇನೆ ಎಂದು ಒತ್ತಾಯಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ನಡೆದ ಬಳಿಕ ಆಕೆ ಕಿರುಚುತ್ತಾ ಓಡಿ ಹೋಗಿದ್ದಾಳೆ. ಆಕೆಯ ಹೊಟ್ಟೆಯ ಭಾಗಕ್ಕೆ ಮೊಣಕಾಲನ್ನು ಊರಿ, ನಂತರ ಕತ್ತು ಹಿಸುಕಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ನಂತರ ಬಾಲಕ ಎರಡೂ ಶವಗಳನ್ನು ಮನೆಯ ಹಿಂಭಾಗದ…

ಬಾಲಕಿಯನ್ನು ಹಿಂಬಾಲಿಸಿ ಲೈಬ್ರರಿ ಬಳಿ ಗುಂಡು ಹಾರಿಸಿದ ಯುವಕ – ಫರೀದಾಬಾದ್‌ನಲ್ಲಿ ಘಟನೆ.

ಫರೀದಾಬಾದ್: ವ್ಯಕ್ತಿಯೊಬ್ಬ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ರಸ್ತೆಯಲ್ಲಿ ಆಕೆಗೆ ಗುಂಡು ಹಾರಿಸಿರುವ ಘಟನೆ ಫರೀದಾಬಾದ್​ನಲ್ಲಿ ನಡೆದಿದೆ. ಆತ ಹಲವು ದಿನಗಳಿಂದ 17 ವರ್ಷದ ಬಾಲಕಿ ಮೇಲೆ ಕಣ್ಣಿರಿಸಿದ್ದ, ಆಕೆಯನ್ನು ಪದೇ ಪದೇ ಹಿಂಬಾಲಿಸುತ್ತಿದ್ದ.  ಬಾಲಕಿ ಹಾಗೂ ಆರೋಪಿ ಯಾವಾಗಲೂ ಹೋಗುತ್ತಿದ್ದ ಲೈಬ್ರರಿ ಹೊರಗೆ ಈ ಘಟನೆ ನಡೆಸಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಗೆ ಬಾಲಕಿಯ ದಿನಚರಿ ತಿಳಿದಿತ್ತು. ಆಕೆ ಬರುತ್ತಾಳೆಂದು ಆತ ಮೊದಲೇ ಬಂದು ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದ ಬಳಿಕ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕಿ ಬರುವ ಮೊದಲೇ ಆತ ಬಂದು ಕಾಯುತ್ತಿರುವುದನ್ನು ತೋರಿಸುತ್ತದೆ. ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಯು ಬಾಲಕಿಯ ಚಲನವಲನಗಳನ್ನು ಗಮನಿಸುತ್ತಿದ್ದ ಆಕೆ ಗ್ರಂಥಾಲಯಕ್ಕೆ ಹೋಗುವ ಮತ್ತು ಬರುವ ಮಾರ್ಗದ ಬಗ್ಗೆ ಮೊದಲೇ ತಿಳಿದಿದ್ದ ಎನ್ನಲಾಗಿದೆ. ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ, ಹಲ್ಲೆಕೋರನನ್ನು ಗುರುತಿಸಿದ್ದು, ಆತ ಮೊದಲೇ ತನಗೆ ಕಿರುಕುಳ ಕೊಟ್ಟಿದ್ದ ಹಾಗಾಗಿ ಆತನನ್ನ ಮರೆಯಲು ಸಾಧ್ಯವೇ ಇಲ್ಲ ಎಂದು ಆಕೆ ಹೇಳಿದ್ದಾಳೆ. ಆತ ತನಗೆ ಗೊತ್ತು, ಬಹಳ ಸಮಯದಿಂದ ತನಗೆ ತೊಂದರೆ ನೀಡುತ್ತಿದ್ದ ಎಂದು ಮಾಹಿತಿ ನೀಡಿದ್ದಾಳೆ. ಬಾಲಕಿಯ ಮೇಲೆ ಗುಂಡು ಹಾರಿಸಿದ ನಂತರ, ಆರೋಪಿಯು ಆಯುಧವನ್ನು ಸ್ಥಳದಲ್ಲಿ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ಸ್ವಲ್ಪ ಸಮಯದ ನಂತರ ಅಧಿಕಾರಿಗಳು…

ಇಂದೋರ್‌ನಲ್ಲಿ ಬಸ್ ಕಂದಕಕ್ಕೆ ಉರುಳಿದ ದುರಂತ – ಮೂವರು ಸಾ*, 30ಕ್ಕೂ ಹೆಚ್ಚು ಜನರಿಗೆ ಗಾಯ.

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಪ್ರಯಾಣಿಕರ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ, 38 ಜನರು ಗಾಯಗೊಂಡಿದ್ದಾರೆ. ಇಂದೋರ್ ಮತ್ತು ಮ್ಹೋವ್ ನಡುವಿನ…

ತೆಲಂಗಾಣ ಬಸ್ ದುರಂತ: ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ತಂದೆ.

ಹೈದರಾಬಾದ್: ತೆಲಂಗಾಣ ಬಸ್ ಅಪಘಾತದಲ್ಲಿ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಮೂವರು ಹೆಣ್ಣುಮಕ್ಕಳು ಮಸಣ ಸೇರಿದ್ದಾರೆ. ಪೋಷಕರ ಆಕ್ರಂದ ಮುಗಿಲುಮುಟ್ಟಿದೆ. ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬುವವರ ಮೂವರು ಹೆಣ್ಣುಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ತನುಷಾ, ಸಾಯಿ ಪ್ರಿಯಾ ಮತ್ತು ನಂದಿನಿ ಎಲ್ಲರೂ ಕಾಲೇಜು ವಿದ್ಯಾರ್ಥಿಗಳು. ಇತ್ತೀಚೆಗೆ ಕುಟುಂಬವು ತಮ್ಮ ಹಿರಿಯ ಮಗಳು…

 “ನಾರಿ ಶಕ್ತಿ ದೇಶದ ಹೆಮ್ಮೆ!” – ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಗೆಲುವಿಗೆ ಪ್ರಧಾನಿ ಮೋದಿ ಶ್ಲಾಘನೆ.

ನವದೆಹಲಿ: ನಿನ್ನೆ ರಾತ್ರಿ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ ಅಂತಿಮ ಪಂದ್ಯದಲ್ಲಿ  ಐತಿಹಾಸಿಕ ಗೆಲುವು ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.…

ಕಾನೂನು ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು.

ದೆಹಲಿ ಹೈಕೋರ್ಟ್ ಸೋಮವಾರ ದೇಶಾದ್ಯಂತ ಲಕ್ಷಾಂತರ ಕಾನೂನು ವಿದ್ಯಾರ್ಥಿಗಳಿಗೆ ಗಮನಾರ್ಹ ಪರಿಹಾರ ನೀಡಿದೆ. ದೇಶಾದ್ಯಂತ ಕಾನೂನು ವಿದ್ಯಾರ್ಥಿಗಳು ಇನ್ನು ಮುಂದೆ ಕಡಿಮೆ ಹಾಜರಾತಿ ಇದ್ದರೂ ಕೂಡ ಸೆಮಿಸ್ಟರ್ ಪರೀಕ್ಷೆಗಳನ್ನು…

IRS ಅಧಿಕಾರಿ ಹುದ್ದೆ ಎಂದು ಮರುಳುಮಾಡಿ CM ಕೋಣೆಗೆ ನುಗ್ಗಲು ಯತ್ನ.

ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಐಆರ್​​ಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಕೋಣೆಗೆ ಪ್ರವೇಶಿಸಲು ಯತ್ನಿಸಿರುವ ಘಟನೆ ವರದಿಯಾಗಿದೆ. ಅನುಮಾನದ ಮೇಲೆ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಆತನಿಂದ ನಕಲಿ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ನಡೆದಿದ್ದೇನು? ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ವಿಭೂತಿಖಂಡದ ಹೋಟೆಲ್…

ದಿನೇಶ್ ಬೀಡಿ ಬ್ರ್ಯಾಂಡ್ ಉದ್ಯಮಿ ಸುರೇಶ್ ಅಗರ್ವಾಲ್ ಮತ್ತು ಮಗ ನರೇಶ್ ಅಗರ್ವಾಲ್ ಶವದಾಳಿಕೆ!

ವೃಂದಾವನ: ಭಾರತದ ಪ್ರಮುಖ ಬೀಡಿ ಬ್ರ್ಯಾಂಡ್ ದಿನೇಶ್ ಬೀಡಿಯ ಮಾಲೀಕರಾಗಿದ್ದ ತಂದೆ ಸುರೇಶ್ ಚಂದ್ ಎಂಬುವವರನ್ನು ಮಗನೇ  ಕೊಲೆಮಾಡಿರುವಘಟನೆವೃಂದಾವನದಲ್ಲಿನಡೆದಿದೆ. ಕುಡಿತದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸುರೇಶ್ ಚಂದ್ ಅಗರ್ವಾಲ್ ಎಂಬುವರು ದಿನೇಶ್ 555 ಬೀಡಿ ಮಾಲೀಕರಾಗಿದ್ದರು. 1977ರಲ್ಲಿ ಕಂಪನಿಯನ್ನು ಕಟ್ಟಿದ್ದರು. ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರ ಮಗ ನರೇಶ್ ಅಗರ್ವಾಲ್​ಗೆ ಕುಡಿತದ ಚಟವಿತ್ತು. ಇದು ನಿತ್ಯವೂ ತಂದೆ–ಮಗನ ನಡುವೆ ಗಲಾಟೆಗೆ ಕಾರಣವಾಗುತ್ತಿತ್ತು. ಶುಕ್ರವಾರ ಸುರೇಶ್ ಚಂದ್ ಹಾಗೂ ನರೇಶ್ ಅಗರ್ವಾಲ್ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಕೋಪದಿಂದ ನರೇಶ್ ತನ್ನ ತಂದೆಗೆ ಗುಂಡು ಹಾರಿಸಿದ್ದಾನೆ. ತಾನೇನೋ ಮಾಡಿದೆ ಎನ್ನುವ ಭಯದಲ್ಲಿ ತನ್ನ ಹಣೆಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ಹಾಗೂ ಮಗ ಇಬ್ಬರೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುರೇಶ್ ಚಂದ್ ಅಗರ್ವಾಲ್ ತಮ್ಮ ಬಹುಕೋಟಿ ಮೌಲ್ಯದ ಬೀಡಿ ವ್ಯವಹಾರವನ್ನು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ…

ತಮಿಳುನಾಡಿನ ಕಾಲೇಜು ವಿದ್ಯಾರ್ಥಿನಿ ಮೇಲೆ ವಿಮಾನ ನಿಲ್ದಾಣದ ಬಳಿ ಸಾಮೂಹಿಕ ಅತ್ಯಾ*ರ.

ಚೆನ್ನೈ: ತಮಿಳುನಾಡಿನ ಕಾಲೇಜು ವಿದ್ಯಾರ್ಥಿನಿ ಮೇಲೆ ವಿಮಾನ ನಿಲ್ದಾಣದ ಬಳಿ ಮೂವರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ತಮಿಳುನಾಡಿನ ಕೊಯಮತ್ತೂರಿನ ವಿಮಾನ ನಿಲ್ದಾಣ ಪ್ರದೇಶದ ಹಿಂದೆ ಭಾನುವಾರ ರಾತ್ರಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ತಿಳಿಸಿರುವ…

ತೆಲಂಗಾಣದ ರಂಗಾರೆಡ್ಡಿಯಲ್ಲಿ ಭೀಕರ ರಸ್ತೆ ಅಪ*ತ! ಬಸ್–ಲಾರಿ ಡಿಕ್ಕಿ.

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ, ಬಸ್​ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. 24 ಜನ ಗಾಯಗೊಂಡಿದ್ದಾರೆ. ಜಲ್ಲಿ ತುಂಬಿದ್ದ…