ಮೆಜೆಸ್ಟಿಕ್, ಕೋರಮಂಗಲ ಸೇರಿ ಹಲವೆಡೆ ಮಳೆ ಅಬ್ಬರ; ವಾಹನ ಸವಾರರು ಪರದಾಟ
ಬೆಂಗಳೂರು: ಹಲವು ದಿನಗಳ ಬಿಸಿಲ ಝಳದಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಂಜೆ ವೇಳೆಗೆ ವರುಣ ಶಾಕ್ ನೀಡಿದ್ದು, ನಗರಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಬಿರುಗಾಳಿ ಜೊತೆಗೆ ಸುರಿದ ಮಳೆಯಿಂದ ರಸ್ತೆಗಳಲ್ಲಿ ಜನರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.
ಮೆಜೆಸ್ಟಿಕ್, ನಗರ ಮಾರುಕಟ್ಟೆ, ಶಾಂತಿನಗರ, ರಿಚ್ಮಂಡ್ ಸರ್ಕಲ್ ಹಾಗೂ ಕೋರಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಅಚಾನಕ್ ಸುರಿದ ಮಳೆಯ ಕಾರಣ ಕೆಲ ರಸ್ತೆಗಳಲ್ಲಿ ಸಂಚಾರ ನಿಧಾನಗೊಂಡಿದ್ದು, ಜನಜೀವನಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ.
For Updates Join our WhatsApp Group More:




