ನಿರ್ದೇಶಕ ಪವನ್ ಒಡೆಯರ್ ಮನೆಯಲ್ಲಿ ಸಂಭ್ರಮ…ಕಾರಣ ಏನು ನೋಡಿ…!

ಸ್ಯಾಂಡಲ್ವುಡ್ ನಿರ್ದೇಶಕ ಪವನ್ ಒಡೆಯರ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರೀಗ ಮತ್ತೆ ತಂದೆಯಾಗುತ್ತಿದ್ದಾರೆ. ಪತ್ನಿ ಅಪೇಕ್ಷಾ ಪುರೋಹಿತ್ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋಶೂಟ್ ಸಹ ಶೇರ್ ಮಾಡಿ ಸಂಭ್ರಮಿಸಿದ್ದಾರೆ.

ಪವನ್ ಒಡೆಯರ್

ಎರಡು ಬಾರಿ ಪ್ರೀತಿ, ಎರಡು ಬಾರಿ ಸಂತೋಷ. ಶೀಘ್ರದಲ್ಲೇ ನಮ್ಮ ಎರಡನೇ ಮಗುವನ್ನು ಸ್ವಾಗತಿಸಲು ನಾವು ಖುಷಿಯಲ್ಲಿದ್ದೇವೆ. ನಮ್ಮ ಹೃದಯಗಳು ಪ್ರೀತಿಯಿಂದ ತುಂಬಿವೆ ಎಂದು ಬರೆದುಕೊಂಡಿದ್ದಾರೆ. 2018ರ ಆಗಸ್ಟ್ನಲ್ಲಿ ಅಪೇಕ್ಷಾ ಮತ್ತು ಪವನ್ ಒಡೆಯರ್ ಜೋಡಿ ಸಪ್ತಪದಿ ತುಳಿದು ಶಾಸ್ತ್ರೋಕ್ತವಾಗಿ ಮದುವೆ ಆಗಿತ್ತು.

ಸ್ಯಾಂಡಲ್ವುಡ್ ಮಂದಿ ಸಲುವಾಗಿಯೂ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿತ್ತು. ಹೀಗೆ ಮದುವೆ ಆದ ಎರಡು ವರ್ಷದ ಬಳಿಕ ಅಂದರೆ 2020ರ ಡಿಸೆಂಬರ್ 10ರಂದು ಅಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಎರಡನೇ ಮಗುವನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *