ಶಿವಮೊಗ್ಗ || ಭದ್ರಾ ಡ್ಯಾಂ ಗೇಟ್‌ ಸಂಪೂರ್ಣ ಬಂದ್ : ರೈತರ ಆತಂಕ ದೂರ

ಶಿವಮೊಗ್ಗ: ಭದ್ರಾ ಡ್ಯಾಂನ ರಿವರ್ ಸ್ಲೀವ್ಸ್ ಗೇಟ್‌ನಿಂದ ಸೋರಿಕೆಯಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ.

ಸ್ಲೀವ್ಸ್ ಗೇಟ್‌ನಿಂದ ಸುಮಾರು 2500ರಿಂದ 3000 ಕ್ಯೂಸೆಕ್​ ನೀರು ನದಿಗೆ ಹರಿದು ಹೋಗುತ್ತಿತ್ತು. ಇದರಿಂದ ಆತಂಕಗೊಂಡ ಅಚ್ಚುಕಟ್ಟು ಪ್ರದೇಶದ ರೈತರು ಎರಡು ದಿನದ ಹಿಂದೆ ಕಾಡ ಅಧ್ಯಕ್ಷರ ಸಮ್ಮುಖದಲ್ಲಿ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಧ್ಯಕ್ಷರು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಅಷ್ಟರಲ್ಲಾಗಲೇ ಶೇ.50ರಷ್ಟು ನೀರು ನದಿಗೆ ಸೋರಿಕೆಯಾಗಿತ್ತು.

ಜಲಾಶಯದ ಇಂಜಿನಿಯರ್‌ಗಳು, ಗುತ್ತಿಗೆದಾರ ವೇದಮೂರ್ತಿ, ನೌಕರರ ತಂಡ ನಿರಂತರವಾಗಿ ಶ್ರಮ ವಹಿಸಿ ಸ್ಲೀವ್ಸ್ ಗೇಟ್‌ನಿಂದ ಸೋರಿಕೆಯಾಗುತ್ತಿದ್ದ ನೀರನ್ನು ಸಂಪೂರ್ಣ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *