ನವದೆಹಲಿ: ದೆಹಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಅವರನ್ನು ಆಗ್ರಾದಲ್ಲಿ ಬಂಧಿಸಲಾಗಿದೆ. ಸುಮಾರು 50 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ದ ಹಲವು ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ದೂರು ನೀಡಿದ್ದರು.
ಶಾರದಾ ಇನ್ಸ್ಟಿಟ್ಯೂಟ್ನಲ್ಲಿ 16 ವಿದ್ಯಾರ್ಥಿನಿಯರಿಗೆ ಕಿರುಕುಳ
ದೆಹಲಿ ಶಾರದಾ ಇನ್ಸ್ಟಿಟ್ಯೂಟ್ನಲ್ಲಿ ವ್ಯಾಸಂಗ ಮಾಡುತ್ತಿದ್ದ 32 ವಿದ್ಯಾರ್ಥಿನಿಯರಲ್ಲಿ 16 ಮಂದಿ ಚೈತನ್ಯಾನಂದನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಅಪರಾಧದ ಸ್ವರೂಪದಲ್ಲಿ, ಅಶ್ಲೀಲ ವಾಟ್ಸಾಪ್ ಸಂದೇಶ, ಕೋಣೆಗೆ ಕರೆಸಿ ಅನಗತ್ಯ ಶಾರೀರಿಕ ಸಂಪರ್ಕಕ್ಕೆ ಮುಂದಾಗುವುದು, ಅಂಕಗಳಿಗೆ ಬೆದರಿಕೆ ಹಾಕುವುದು ಸೇರಿದಂತೆ ಹಲವು ಗಂಭೀರ ಆರೋಪಗಳಿವೆ.
ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ದಾಖಲೆ ಮತ್ತು ಸಾಕ್ಷ್ಯಗಳು
ಪಟಿಯಾಲ ಹೌಸ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ 16 ವಿದ್ಯಾರ್ಥಿನಿಯರ ಹೇಳಿಕೆ ದಾಖಲಾಗಿದ್ದು, 300 ಪುಟಗಳಿಗೂ ಅಧಿಕ ಸಾಕ್ಷ್ಯಗಳನ್ನು ಶಾರದಾ ಪೀಠ ಮತ್ತು ವಿದ್ಯಾರ್ಥಿಗಳು ಪೊಲೀಸರು ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಆರೋಪಿಯು ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಬಗ್ಗೆ ಸಾಕ್ಷ್ಯವಿದೆ.
ಸಹಕರಿಸಿದ ಡೀನ್ ಮತ್ತು ಮಹಿಳಾ ಸಿಬ್ಬಂದಿ?
ಪೊಲೀಸರು ನೀಡಿದ ಮಾಹಿತಿಯಂತೆ, ಸ್ವಾಮೀಜಿಗೆ ಸಂಸ್ಥೆಯ ಡೀನ್ ಮತ್ತು ಇಬ್ಬರು ಮಹಿಳಾ ಸಿಬ್ಬಂದಿಯ ಸಹಕಾರವೂ ಇತ್ತೆಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
ವಿದೇಶಕ್ಕೆ ಪಲಾಯನ ತಡೆಯಲು ಲುಕ್ ಔಟ್ ನೋಟಿಸ್
ಆರೋಪಿಯು ವಿದೇಶಕ್ಕೆ ಪಲಾಯನ ಮಾಡುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಈ ನಡುವೆ ಶೃಂಗೇರಿಯ ಶಾರದಾ ಪೀಠವು ಸ್ವಾಮೀಜಿಯ ಪವರ್ ಆಫ್ ಅಟಾರ್ನಿ ರದ್ದುಪಡಿಸಿ, 11 ಸದಸ್ಯರ ಹೊಸ ಆಡಳಿತ ಮಂಡಳಿಯನ್ನು ರಚಿಸಿದೆ.
For More Updates Join our WhatsApp Group :




