ಮನೆಯವರು, ಸ್ನೇಹಿತರನ್ನು ನಂಬುವಂತೆ ಕೆಲಸದ ಸ್ಥಳದಲ್ಲಿಎಲ್ಲರನ್ನೂ ಕುರುಡಾಗಿ ನಂಬಲು ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ಒಳ್ಳೆಯವರಾಗಿ ಕಂಡರೂ ಕೂಡ ತಮ್ಮ ಸ್ವಂತ ಲಾಭಕ್ಕಾಗಿ ರಾಜಕೀಯ ಮಾಡುವವರು, ನಿಮ್ಮ ಬೆನ್ನಹಿಂದೆ ಮಸಲತ್ತು ಮಾಡುವವರು ತುಂಬಾ ಜನ ಇರುತ್ತಾರೆ. ಅಂತಹ ಸಹದ್ಯೋಗಿಗಳನ್ನು ಕುರುಡಾಗಿ ನಂಬಿದರೆ ಖಂಡಿತವಾಗಿಯೂ ನಿಮ್ಮ ವೃತ್ತಿ ಜೀವನಕ್ಕೆ ಕುತ್ತು ಬರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಅದರಲ್ಲೂ ಈ ಒಂದಷ್ಟು ಜನರಿಂದ ಸಾಧ್ಯವಾದಷ್ಟು ದೂರವಿರಬೇಕಂತೆ, ಅಂತಹವರನ್ನು ಯಾವುದೇ ಕಾರಣಕ್ಕೂ ನಂಬಬಾರದಂತೆ. ಹಾಗಿದ್ದರೆ ಕೆಲಸದ ಸ್ಥಳದಲ್ಲಿ ಎಂತಹ ಜನರಿಂದ ದೂರವಿದ್ದಷ್ಟು ಒಳ್ಳೆಯದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಕೆಲಸದ ಸ್ಥಳದಲ್ಲಿ ಇಂತಹ ಜನರಿಂದ ದೂರವಿರಿ:
ಬೆನ್ನ ಹಿಂದೆ ಮಾತನಾಡುವ ಜನರಿಂದ ದೂರವಿರಿ: ನಿಮ್ಮ ಮುಂದೆ ಸಿಹಿಯಾದ ಮಾತುಗಳನ್ನಾಡುವ ಮತ್ತು ನಿಮ್ಮ ಬೆನ್ನ ಹಿಂದೆ ಇತರ ಸಹದ್ಯೋಗಿಗಳೊಂದಿಗೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರಿಂದ ನೀವು ಸಾಧ್ಯವಾದಷ್ಟು ದೂರವಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಏಕೆಂದರೆ ಇಂತಹ ಜನರು ನಿಮ್ಮ ಕೆಟ್ಟದ್ದನ್ನೇ ಬಯಸುತ್ತಾರೆ, ಅಂತಹವರು ಖಂಡಿತವಾಗಿಯೂ ನಿಮ್ಮ ವೃತ್ತಿ ಜೀವನದ ಏಳಿಗೆಗೆ ಮುಳುವಾಗುತ್ತಾರೆ. ಹಾಗಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ಅಂತಹ ಜನರಿದ್ದರೆ ಅವರಿಂದ ಸಾಧ್ಯವಾದಷ್ಟು ದೂರವಿರಿ.
ನಿಮ್ಮನ್ನು ಗೇಲಿ ಮಾಡುವವರಿಂದ ದೂರವಿರಿ: ಕಚೇರಿಯಲ್ಲಿ ಕೆಲವರು ಪ್ರತಿಯೊಂದು ಸಣ್ಣ ವಿಷಯಕ್ಕೂ ನಿಮ್ಮನ್ನೇ ಟಾರ್ಗೆಟ್ ಮಾಡಿ ಕಾಮೆಂಟ್‌ಗಳು ಅಥವಾ ತಮಾಷೆ ಮಾಡುತ್ತಾರೆ, ಅಂತಹ ಜನರಿಂದ ನೀವು ಅಂತರ ಕಾಯ್ದುಕೊಂಡಷ್ಟು ಒಳ್ಳೆಯದು. ಏಕೆಂದರೆ ಇವರ ಮಾತುಗಳಿಂದ ನಿಮ್ಮ ಮನಸ್ಸಿಗೂ ನೋವಾಗುವುದಲ್ಲೇ ಅವರು ನಿಮ್ಮ ಗೌರವಕ್ಕೂ ಧಕ್ಕೆ ತರುತ್ತಾರೆ. ಆದ್ದರಿಂದ, ಅಂತಹ ಜನರಿಂದ ದೂರವಿರುವುದು ನಿಮಗೆ ಮತ್ತು ನಿಮ್ಮ ವೃತ್ತಿಜೀವನಕ್ಕೆ ಉತ್ತಮ.
For More Updates Join our WhatsApp Group :
