ಚಂಡೀಗಢ || ಅಮೃತ್ಸರ ದೇಗುಲ ಸ್ಫೋಟ ಪ್ರಕರಣ: ಶಂಕಿತ ಆರೋಪಿ ಪಂಜಾಬ್ ಪೊಲೀಸರ ಗುಂಡಿಗೆ ಬಲಿ

ಚಂಡೀಗಢ || ಅಮೃತ್ಸರ ದೇಗುಲ ಸ್ಫೋಟ ಪ್ರಕರಣ: ಶಂಕಿತ ಆರೋಪಿ ಪಂಜಾಬ್ ಪೊಲೀಸರ ಗುಂಡಿಗೆ ಬಲಿ

ಚಂಡೀಗಢ : ಅಮೃತ್ಸರದ ದೇಗುಲದ ಹೊರಭಾಗದಲ್ಲಿ ನಡೆದ ಸ್ಪೋಟ ಪ್ರಕರಣದ ಶಂಕಿತ ಆರೋಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಈ ಘಟನೆಯನ್ನು ಪೊಲೀಸರು ದೃಢಪಡಿಸಿದ್ದಾರೆ.

ಸ್ಪೋಟದ ಬಳಿಕ ಆತನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಆತ ತಪ್ಪಿಸಿಕೊಳ್ಳುವ ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಚ್ 15ರಂದು ಅಮೃತ್ಸರದ ಠಾಕೂರ್ ದ್ವಾರದ ದೇಗುಲದ ಹೊರಗೆ ಸ್ಪೋಟ ಸಂಭವಿಸಿದ್ದು, ತೀವ್ರತೆಗೆ ಗೋಡೆ ಮತ್ತು ಕಿಟಕಿಗಳಿಗೆ ಹಾನಿಯಾಗಿದ್ದವು.

“ಈ ಪ್ರಕರಣದ ನಿರ್ದಿಷ್ಟ ಗುಪ್ತಚರ ಮಾಹಿತಿ ಮೇರೆಗೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸ್ಪೋಟಕ್ಕೆ ಕಾರಣನಾದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದರು. ರಜಸನ್ಸಿ ಎಂಬಲ್ಲಿ ಶಂಕಿತನ ಚಲನವಲನ ಪತ್ತೆಯಾಗಿದ್ದು, ಬಂಧಿಸಲು ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿ, ಪೊಲೀಸರ ಮೇಲೆಯೇ ಗುಂಡಿನ ದಾಳಿಗೆ ಮುಂದಾಗಿದ್ದು, ಹೆಡ್ ಕಾನ್ಸ್ಟೇಬಲ್ ಗುರ್ಪ್ರೀತ್ ಸಿಂಗ್ ಗಾಯಗೊಂಡರು” ಎಂದು ಡಿಜಿಪಿ ಗೌರವ್ ಯಾದವ್ ‘ಎಕ್ಸ್’ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

“ಶಂಕಿತನ ವಿರುದ್ಧ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಆತ ಗಾಯಗೊಂಡಿದ್ದಾನೆ. ನಂತರ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಜೊತೆಗಿದ್ದ ಮತ್ತೊಬ್ಬ ಶಂಕಿತ ಪರಾರಿಯಾಗಿದ್ದು, ಬಂಧನಕ್ಕೆ ಶೋಧ ನಡೆಯುತ್ತಿದೆ” ಎಂದು ಅವರು ಹೇಳಿದರು.

ದೇಗುಲದ ಮುಂದೆ ನಡೆದ ಸ್ಪೋಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದರಲ್ಲಿ ಇಬ್ಬರು ಅಪರಿಚಿತರು ಮೋಟಾರ್ಬೈಕ್ನಲ್ಲಿ ಬಂದಿದ್ದು, ಕೆಲವು ನಿಮಿಷಗಳ ಕಾಲ ಕಾದು ಬಳಿಕ ದೇಗುಲದತ್ತ ಸ್ಪೋಟ ಎಸೆದು ಪರಾರಿಯಾಗಿರುವ ದೃಶ್ಯಗಳಿವೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿರಲಿಲ್ಲ. ಆದರೆ, ಘಟನೆ ಖಂಡ್ವಾಲ ಪ್ರದೇಶದ ಜನರಲ್ಲಿ ಆತಂಕ ಮೂಡಿಸಿತ್ತು.

ಈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *