ಬಂಧನ್ ಬ್ಯಾಂಕ್ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಪರಿಷ್ಕರಣೆ.
ನವದೆಹಲಿ: ಎಚ್ಡಿಎಫ್ಸಿ ಬ್ಯಾಂಕ್, ಬಂಧನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಹೊಸ ಹಣಕಾಸು ವರ್ಷದಿಂದ ಎಟಿಎಂ ಬಳಕೆಯ ನಿಯಮಗಳಲ್ಲಿ ಬದಲಾವಣೆ ಮಾಡಿವೆ. ಯುಪಿಐ ಆಧಾರಿತ ಎಟಿಎಂ ವಿತ್ಡ್ರಾಯಲ್, ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಇತ್ಯಾದಿ ನಿಯಮಗಳ ಪರಿಷ್ಕರಣೆ ಮಾಡಲಾಗಿದೆ. ಏಪ್ರಿಲ್ 1ರಿಂದ ಈ ಹೊಸ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳು ಚಾಲನೆಗೆ ಬರಲಿವೆ.
ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂ ನಿಯಮಗಳು
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಹಲವು ಎಟಿಎಂಗಳಲ್ಲಿ ಯುಪಿಐ ಆಧಾರಿತ ಕ್ಯಾಷ್ ವಿತ್ಡ್ರಾಯಲ್ ಸೌಲಭ್ಯ ನೀಡುತ್ತದೆ. ಯುಪಿಐ ಮೂಲಕ ಎಟಿಎಂನಲ್ಲಿ ಮಾಡಲಾಗುವ ಪ್ರತೀ ಟ್ರಾನ್ಸಾಕ್ಷನ್ ಅನ್ನೂ ಮಾಮೂಲಿಯ ಎಟಿಎಂ ಟ್ರಾನ್ಸಾಕ್ಷನ್ ಎಂದೇ ಪರಿಗಣಿಸಲಾಗುತ್ತದೆ. ಅಂದರೆ, ಎಟಿಎಂ ಫ್ರೀ ಯೂಸೇಜ್ ಲಿಮಿಟ್ ಲೆಕ್ಕಾಚಾರಕ್ಕೆ ಇದು ಬರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ವಿತ್ಡ್ರಾಯಲ್ ಮಿತಿ
ಪಿಎನ್ಬಿಯ ಸಿಗ್ನೇಚರ್ ಡೆಬಿಟ್ ಕಾರ್ಡ್ಗಳಾದರೆ ದಿನದ ವಿತ್ಡ್ರಾಯಲ್ ಮಿತಿ 1.5 ಲಕ್ಷ ರೂನಿಂದ 75,000 ರೂಗೆ ಇಳಿಯಲಿದೆ. ಮೇಲೆ ತಿಳಿಸಿದ ವಿವಿಧ ಬ್ಯಾಂಕುಗಳ ಹೊಸ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳು ಏಪ್ರಿಲ್ 1ರಿಂದ ಚಾಲನೆಗೆ ಬರಲಿವೆ.
For More Updates Join our WhatsApp Group :




