ಚಿಕ್ಕಮಗಳೂರು ಕಲ್ಲುತೂರಾಟ ಪ್ರಕರಣ.

ಚಿಕ್ಕಮಗಳೂರು ಕಲ್ಲುತೂರಾಟ ಪ್ರಕರಣ.

ಇಬ್ಬರ ವಿರುದ್ಧ ಪ್ರಕರಣ, ಹಿಡಿದವರ ಮೇಲೂ ಎಫ್‌ಐಆರ್.

ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ತಿಲಕ್ ಪಾರ್ಕ್ ಸಮೀಪ ಹಿಂದೂ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಎಫ್​ಐಆರ್​​ಗಳನ್ನು ದಾಖಲಿಸಿದ್ದಾರೆ. ಕಲ್ಲು ತೂರಾಟ ಮಾಡಿದವರ ಹಾಗೂ ಅವರನ್ನು ಹಿಡಿದು ಪೊಲೀಸರಿಗೊಪ್ಪಿಸಿದವರ ವಿರುದ್ಧವೂ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಸುಧಾ ಎಂಬವರ ಮನೆಯ ಮೇಲೆ ಕಲ್ಲು ಎಸೆದ ಆರೋಪದ ಮೇರೆಗೆ ಹುಸೇನ್ ಮತ್ತು ರಿಯಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಲ್ಲು ತೂರಾಟ ನಡೆಸಿದವರನ್ನು ಹಿಡಿದ ಶಾಮ್ ಮತ್ತು ಸಂತೋಷ್ ಮೇಲೂ ಹಲ್ಲೆ ಆರೋಪದಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಶಾಮ್ ಅವರು ಬಜರಂಗದಳ ಹಾಸನ ವಿಭಾಗದ ಸಹ ಸಂಚಾಲಕರಾಗಿದ್ದು, ಸಂತೋಷ್ ಬಿಜೆಪಿ ಯುವ ಮೋರ್ಚಾ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿದ್ದಾರೆ.

ತಮ್ಮ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಲಾಗಿದೆ ಎಂದು ಹುಸೇನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಗಾಯಗೊಂಡಿರುವ ಆಕ್ಷದ್ ಮತ್ತು ಹಸೇನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಕ್ಷದ್ ಹಾಗೂ ಹುಸೇನ್ ಮೇಲೆ BNS ಕಾಯ್ದೆಯ ವಿವಿಧ ಕಲಂಗಳ ಅಡಿ ಹಾಗೂ ಎಸ್​ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಶಾಮ್ ಮತ್ತು ಸಂತೋಷ್ ವಿರುದ್ಧವೂ BNS ವಿವಿಧ ಕಲಂಗಳಡಿ ಕೇಸ್ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ, ಹಿಂದೂಗಳ ಮೇಲೂ ಕೈಗೊಳ್ಳುವಂತೆ ಮುಸ್ಲಿಂ ಸಮುದಾಯದವರು ಹಾಗೂ ಎಸ್​​ಡಿಪಿಐ ಮುಖಂಡರು ಆಗ್ರಹ ವ್ಯಕ್ತಪಡಿಸಿದ್ದರು. ಇದೇ ವೇಳೆ ವಿಹೆಚ್​ಪಿ ಮತ್ತು ಬಜರಂಗದಳ ಮುಖಂಡರೂ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ರಾತ್ರಿ ಬಸವನಹಳ್ಳಿ ಪೊಲೀಸ್ ಠಾಣೆ ಎದುರು ನೂರಾರು ಮಂದಿ ಜಮಾಯಿಸಿದ ಪರಿಣಾಮ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *