ಗುಂಡ್ಲಹಳ್ಳಿ ಶಾಲೆಯಿಂದ ದಾಖಲಾತಿ ಜಾಗೃತಿ ಅಭಿಯಾನ.
ಮಧುಗಿರಿ: ತಾಲೂಕಿನ ಕಸಬಾ ಹೋಬಳಿಯ ಗುಂಡ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು ಬ್ಯಾನರ್ ಹಿಡಿದು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸುವಂತೆ ಮನೆ ಮನೆಗೆ ಭೇಟಿ ನೀಡಿ ಮನವಿ ಮಾಡಿದ್ರು.
ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಆದೇಶದ ಮೇರೆಗೆ ಸರ್ಕಾರಿ ಶಾಲಾ ದಾಖಲಾತಿ ಹೆಚ್ಚಿಸಲು ಮನೆಮನೆಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಅದರಂತೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಕೂಡ ಶಿಕ್ಷಕರೊಟ್ಟಿಗೆ ಕೈಜೋಡಿಸಿ ಗುಂಡ್ಲಹಳ್ಳಿ ಸರ್ಕಾರಿ ಶಾಲೆಯನ್ನು ಉಳಿಸಲು ದಾಖಲಾತಿ ಹೆಚ್ಚಿಸಲೇಬೇಕೆಂದು ಜಾಗೃತಿ ಆಂದೋಲನದಲ್ಲಿ ಉತ್ಸುಕರಾಗಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಗುಂಡ್ಲಹಳ್ಳಿ ಸರ್ಕಾರಿ ಹಿರಿಯ ಪಾಠಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ ಸರ್ಕಾರಿ ಶಾಲೆ ಉಳಿಯಬೇಕೆಂದರೆ ದಾಖಲಾತಿ ಹೆಚ್ಚಿದರೆ ಮಾತ್ರ ಸಾಧ್ಯ, ಈಗಿರುವ ಖಾಸಗಿ ಶಾಲೆಯ ಪೈಪೋಟಿಗಳ ನಡುವೆ ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಸವಲತ್ತು, ಸಲಕರಣೆಗಳನ್ನು ನೀಡುತ್ತಿದ್ದು ಉತ್ತಮ ಬೋಧಕೇತರ ವರ್ಗದವರನ್ನು ಹೊಂದಿದೆ. ಅಕ್ಕ ಪಕ್ಕದ ಸೋಮಲಾರ, ಆಚೇನಹಳ್ಳಿ, ಡಿವಿ ಹಳ್ಳಿ ಗ್ರಾಮಗಳಿಗೂ ಭೇಟಿ ನೀಡಿ ಪೋಷಕರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ ಜೊತೆಗೆ 5ನೇ ತರಗತಿ ತೇರ್ಗಡೆಯಾಗಿರುವ ಮಕ್ಕಳನ್ನು ಆರನೇ ತರಗತಿಯಿಂದ ನಮ್ಮ ಶಾಲೆಗೆ ಸೇರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸಹ ಶಿಕ್ಷಕಿ ಶ್ರೀವಲ್ಲಿ, ಶಾಲೆಯ ಮಕ್ಕಳು ಸೇರಿ ಮನೆ ಮನೆಗೆ ತೆರಳಿ ಶಾಲಾ ಸೌಲಭ್ಯಗಳು ಹಾಗೂ ಭೋದನೆ ಕುರಿತು ಪೋಷಕರಿಗೆ ಮನದಟ್ಟಾಗುವಂತೆ ಮಾಹಿತಿ ನೀಡಿದ್ದಾರೆ.
For More Updates Join our WhatsApp Group :



