ಚೀನಾದ : ವಿದೇಶಕ್ಕೆ ತೆರಳುವ ಭಾರತೀಯರು ಅಲ್ಲಿ ಏನಾದ್ರೂ ವಿಶೇಷತೆ ಕಂಡರೆ ಅದರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗುತ್ತಾರೆ. ಆದರೆ ಇಲ್ಲೊಬ್ಬರು ಭಾರತೀಯ ಯೂಟ್ಯೂಬರ್ ಚೀನಾದ ರಸ್ತೆಯಲ್ಲಿ ಕ್ಷೌರಿಕನನ್ನು ಕಂಡು ಅಚ್ಚರಿಗೊಂಡಿದ್ದು, ಆ ಬಳಿಕ ಕೂದಲನ್ನು ಕತ್ತರಿಸಲು ನಿರ್ಧಾರ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿದೇಶದಲ್ಲಿ ಕೂದಲಿಗೆ ಕತ್ತರಿಸಿಕೊಂಡ ಅನುಭವವನ್ನು ಹಂಚಿಕೊಂಡಿದ್ದು, ಆಮೇಲೆ ಏನಾಯ್ತು ಗೊತ್ತಾ? ಈ ಹೊಸ ಪ್ರಯೋಗಕ್ಕೆ ತಮ್ಮನ್ನು ಒಗ್ಗಿಕೊಂಡ ಬಳಿಕ ಬಂದ ರಿಸಲ್ಟ್ ನೋಡಿ ಅವರಿಗೆ ಶಾಕ್ ಆಗಿದೆ.

Devaang sethi ಹೆಸರಿನ ಯೂಟ್ಯೂಬ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಭಾರತೀಯ ಯೂಟ್ಯೂಬರ್ ಚೀನಾಕ್ಕೆ ಹೋದ ವೇಳೆಯಲ್ಲಿ ರಸ್ತೆಬದಿಯಲ್ಲಿ ಕ್ಷೌರಿಕನನ್ನು ಕಾಣುತ್ತಾರೆ. ಕ್ಷೌರಿಕನನ್ನು ಕಂಡ ತಕ್ಷಣ ಕೂದಲನ್ನು ಕತ್ತರಿಸಲು ನಿರ್ಧರಿಸುತ್ತಾರೆ. ಕೊನೆಗೆ ಫೋನ್ನಲ್ಲಿರುವ ಎಐನಿಂದ ನನ್ನ ಕೂದಲನ್ನು ಚಿಕ್ಕದಾಗಿ ಕತ್ತರಿಸಿ ಎಂದು ಇಂಗ್ಲಿಷ್ನಿಂದ ಚೈನೀಸ್ಗೆ ಅನುವಾದಿಸಿ, ವ್ಯಕ್ತಿಗೆ ತೋರಿಸುತ್ತಾರೆ. ಇದನ್ನು ಅರ್ಥ ಮಾಡಿಕೊಂಡ ಈ ಕ್ಷೌರಿಕನು ಕೂದಲನ್ನು ಕತ್ತರಿಸಲು ಮುಂದಾಗುತ್ತಾನೆ. ಆದರೆ ಈ ಕ್ಷೌರಿಕನ ಬಳಿ ಯಾವುದೇ ವ್ಯವಸ್ಥೆ ಇರಲಿಲ್ಲ. ಕನ್ನಡಿಯೂ ಇರಲಿಲ್ಲ. ಬೇಕಾದ ಎಲ್ಲಾ ಸಾಧನಗಳನ್ನು ಸಣ್ಣ ಚೀಲದೊಳಗೆ ಇಟ್ಟುಕೊಂಡಿದ್ದು, ಗ್ರಾಹಕರಿಗೆ ಕೂರಲು ಕುರ್ಚಿ ಮಾತ್ರ ಇರುವುದನ್ನು ಇಲ್ಲಿ ಗಮನಿಸಬಹುದು.
