ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತಿದ್ದಾಗಿ ಹೇಳಿದ್ದ ದೂರುದಾರ ಚಿನ್ನಯ್ಯ ಬಂಧನವಾಗಿದ್ದು, ಕ್ಷಣ ಕ್ಷಣಕ್ಕೂ ಹೊಸ ಅಂಶ ಆಚೆ ಬರುತ್ತಿದೆ. ಸದ್ಯ ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿರುವ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಚಿನ್ನಯ್ಯ ಕೋರ್ಟ್ ತೆಗೆದುಕೊಂಡು ಹೋಗಿದ್ದ ಮಾನವನ ತಲೆ ಬುರುಡೆ ಬಗ್ಗೆ ತನಿಖೆ ನಡೆಸಿದ್ದಾರೆ. ಬುರುಡೆ ಯಾರದ್ದು? ಎಲ್ಲಿಂದ ತಂದಿರುವುದು ಎನ್ನುವುದನ್ನು ಬಾಯ್ಬಿಡಿಸಲು ಎಸ್ಐಟಿ ವಿಚಾರಣೆ ನಡೆಸಿದೆ.
ಇನ್ನು ಮಾಸ್ಕ್ ಮ್ಯಾನ್ ತಂದ ಬುರುಡೆಯ Exclusive ಮಾಹಿತಿ ಲಭ್ಯವಾಗಿದೆ. ಚಿನ್ನಯ್ಯ ತಂದಿದ್ದ ಬುರುಡೆಗೆ ದೆಹಲಿ ಲಿಂಕ್ ಬಯಲಿಗೆ ಬಂದಿದೆ. ಹೀಗಾಗಿ ಬುರುಡೆ ಸಮೇತ ದೆಹಲಿಗೆ ಕೊಂಡೊಯ್ದಿದ್ದು, ಅಲ್ಲಿ ಪ್ರತಿಷ್ಠಿತ ವ್ಯಕ್ಯಿಯನ್ನು ಭೇಟಿ ಮಾಡಿ ಬುರುಡೆ ತೋರಿಸದ್ದ ಎನ್ನುವುದು ತಿಳಿದುಬಂದಿದೆ.
For More Updates Join our WhatsApp Group :