‘ಪುಷ್ಪ 2’ ಸಾಂಗ್ ಟ್ರೆಂಡಿಂಗ್ : ತಗ್ಗೋದೇ ಇಲ್ಲ 

  • ಅಭಿಮಾನಿಗಳು ಭಾರೀ ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಪುಷ್ಟ 2
  • ಕಾರ್ಮಿಕರ ದಿನದ ಅಂಗವಾಗಿ ಟೈಟಲ್ ಟ್ರ್ಯಾಕ್ ಬಿಡುಗಡೆ
  • ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ ಹಾಡು

ಸಿನಿಮಾ : ಟೀಸರ್ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿರುವ ‘ಪುಷ್ಪ 2’ ಸಿನಿಮಾದ ಮೊದಲ ಹಾಡು ಕಾರ್ಮಿಕರ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ.

ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಸೇರಿ 6 ಭಾಷೆಯಲ್ಲಿ ಟೈಟಲ್ ಟ್ರಾಕ್ ರಿಲೀಸ್ ಆಗಿದೆ. ಸಾಮಾನ್ಯ ಕಾರ್ಮಿಕ ಪುಷ್ಪರಾಜ್ ಶ್ರೀಮಂತನಾಗಿ ಬೆಳೆದ ರೀತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ಮೇ 1ರಂದು ರಿಲೀಸ್ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಾಂಗ್ ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದು ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಪುಷ್ಪ ಪುಷ್ಪ ಅಂತಾ ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು, ನಕಾಶ್ ಅಜೀಜ್, ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಕಂಠ ಕುಣಿಸಿದ್ದಾರೆ.

ಪುಷ್ಪನಿಗೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಅಲ್ಲು ಅರ್ಜುನ್ ಜಭರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲು ಹೊಸ ಸ್ಟೈಲ್ ತಗ್ಗೋದೇ ಇಲ್ಲ ಎಂಬ ಡೈಲಾಗ್ ಫ್ಯಾನ್ಸ್‌ ಕಿಕ್ ಕೊಡ್ತಿದೆ. ಮೈತ್ರಿ ಮೂವೀ ಮೇಕರ್ಸ್ ದುಬಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಮಾಡಿದೆ

Click here to join Pragathi webportal Whatsapp group : https://chat.whatsapp.com/FgmwH9BYVs9IxV4fA1um2M

Leave a Reply

Your email address will not be published. Required fields are marked *