ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಬೆಳೆಯಬೇಕು ಎಂದು ಕನಸು ಕಂಡಿದ್ದ ಸಂತೋಷ್ ಬಾಲರಾಜ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ‘ಗಣಪ’, ‘ಕರಿಯ 2’ ಮುಂತಾದ ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದರು.
ಚಿಕ್ಕ ವಯಸ್ಸಿನಲ್ಲಿ ಅವರು ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಅವರು ಮಾತನಾಡಿದ್ದಾರೆ. ‘ತಾನು ದೊಡ್ಡ ನಿರ್ಮಾಪಕರ ಮಗ ಎಂಬ ಆಹಂ ಆತನಿಗೆ ಇರಲಿಲ್ಲ. ತಮಗಿಂತ ಚಿಕ್ಕವರು ಈ ರೀತಿ ನಿಧನರಾಗಿರುವುದು ಬಹಳ ನೋವಾಗುತ್ತದೆ’ ಎಂದು ಚಂದ್ರಚೂಡ್ ಹೇಳಿದ್ದಾರೆ. ಸಂತೋಷ್ ಬಾಲರಾಜ್ ಜೊತೆಗಿನ ಒಡನಾಟವನ್ನು ಅವರು ನೆನಪಿಸಿಕೊಂಡಿದ್ದಾರೆ.
For More Updates Join our WhatsApp Group :