ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಮನವಿ ಮಾಡಿದ ತಮಿಳುನಾಡಿನ CM..!

ಚೆನ್ನೈ:  ತಮಿಳುನಾಡಿಗೆ ನೀಡಬೇಕಾದ ಕಾವೇರಿ ನೀರಿನ ಪಾಲನ್ನು ಕರ್ನಾಟಕ ಬಿಡುಗಡೆ ಮಾಡಿಲ್ಲ. ಈಗಲೇ ನೀರು ಹರಿಸಿದರೆ ಮಾತ್ರ ಕುರುವೈ (ಅಲ್ಪಾವಧಿ) ಬೆಳೆ ಉಳಿಸಬಹುದು. ಹಾಗಾಗಿ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಕಾವೇರಿ

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಮಿಳುನಾಡಿನ ಕಾವೇರಿ ಮುಖಜಭೂಮಿ ಪ್ರದೇಶದ ರೈತರಿಗೆ ಅಲ್ಪಾವಧಿಯ ಕುರುವೈ ಬೆಳೆ ನಿರ್ಣಾಯಕವಾಗಿದೆ. ಈ ಅವಧಿಯಲ್ಲಿ ನಿಗದಿಪಡಿಸಿರುವ 26.32 ಟಿಎಂಸಿ ಅಡಿ ನೀರಿಗೆ ಬದಲಿಗೆ ಜೂನ್ 1 ರಿಂದ ಜುಲೈ 17 ರವರೆಗೆ ಅಂತರರಾಜ್ಯ ಗಡಿ ಬಿಳಿಗುಂಡ್ಲುವಿನಲ್ಲಿ 3.78 ಟಿಎಂಸಿ ಅಡಿ ನೀರು ಮಾತ್ರ ಬಂದಿದೆ. ಇದರಿಂದ 22.54 ಟಿಎಂಸಿ ಅಡಿ ನೀರಿನ ಕೊರತೆ ಉಂಟಾಗಿದೆ ಎಂದು ಹೇಳಿದ್ದಾರೆ.

ಸಕಾಲದಲ್ಲಿ ಕುರುವೈ ಬೆಳೆ ಬೆಳೆಯಲು ಅನುಕೂಲವಾಗುವಂತೆ ಈ ವರ್ಷ ಜೂನ್ 12 ರಂದು ತಮಿಳುನಾಡಿನ ಮೆಟ್ಟೂರು ಜಲಾಶಯದಿಂದ ನೀರು ಬಿಡಲಾಗಿದೆ. ನೈಋತ್ಯ ಮಾನ್ಸೂನ್ ವಿಳಂಬವಾಗಿದ್ದರೂ, ಜುಲೈನಲ್ಲಿ ವೇಗ ಪಡೆದುಕೊಂಡಿದೆ. ಆದರೆ, ಕರ್ನಾಟಕ ಎರಡು ಜಲಾಶಯಗಳಿಂದ ನೀರು ಹರಿಸಿಲ್ಲ. ಇದರ ಪರಿಣಾಮ  ಮೆಟ್ಟೂರು ಜಲಾಶಯದಲ್ಲಿನ ನೀರಿನ ಸಂಗ್ರಹ ಕ್ಷೀಣಿಸುತ್ತಿದೆ ಮತ್ತು ಪ್ರಸ್ತುತ ಸಂಗ್ರಹವು ಸುಮಾರು 20 ದಿನಗಳವರೆಗೆ ಮಾತ್ರ ನೀರಾವರಿಗೆ ಉಳಿಸಿಕೊಳ್ಳಬಹುದು ಎಂದು ಸ್ಟಾಲಿನ್ ಮಾಹಿತಿ ನೀಡಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕ ತಕ್ಷಣ ನೀರು ಬಿಟ್ಟರೆ ಮಾತ್ರ ಕುರುವೈ ಬೆಳೆ ಉಳಿಸಬಹುದು. ಆದ್ದರಿಂದ, ಈ ವಿಷಯದ ಬಗ್ಗೆ ಕೇಂದ್ರ ಕೂಡಲೇ ಮಧ್ಯಪ್ರವೇಶಿಸಬೇಕು. ಸುಪ್ರೀಂ ಕೋರ್ಟ್ ಸೂಚಿಸಿದ ಮಾಸಿಕ ವೇಳಾಪಟ್ಟಿ ಪಾಲಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯು ಎಂಎ) ಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದಿಂದ ನೀರು ಬಿಡುಗಡೆ ಮಾಡಲು ಅಗತ್ಯ ಕಾರ್ಯವಿಧಾನ ಜಾರಿಗೆ ತರಲು ಸಿಡಬ್ಲ್ಯೂಎಂಎಗೆ ಸಲಹೆ ನೀಡಲಾಗುವುದು ಎಂದು ಕೇಂದ್ರ ಸಚಿವರು ದುರೈಮುರುಗನ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *