ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತೇ ಹಾಗೆ, ನೇರ ಹಾಗೂ ಮೊನಚು. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರಿಗೆ ಅದು ಗೊತ್ತಿತ್ತು, ಆದರೆ ಇವತ್ತು ಸದನದಲ್ಲಿ ಮತ್ತೊಮ್ಮೆ ಅದನ್ನು ಅರಿತುಕೊಂಡರು. ಮುಖ್ಯಮಂತ್ರಿ ಬೆಂಗಳೂರು ಕಾಲ್ತುಳಿತ ದುರಂತ ವಿಷಯದಲ್ಲಿ ಸದನಕ್ಕೆ ಉತ್ತರ ನೀಡುವಾಗ ಬೆಂಗಳೂರು ಜಿಲ್ಲಾಧಿಕಾರಿ ಅನ್ನುವ ಬದಲು ಜಿಲ್ಲಾಧ್ಯಕ್ಷರು ಅನ್ನುತ್ತಾರೆ. ಅವರ ಹಿಂದೆ ಕುಳಿತಿದ್ದ ಶಾಸಕರೊಬ್ಬರು ಅವರನ್ನು ಸರಿಮಾಡುತ್ತಾರೆ,
ಈ ವಿಷಯದಲ್ಲೇ ಬಿಜೆಪಿ ಶಾಸಕರು ಸಿದ್ದರಾಮಯ್ಯ ಕಾಲೆಳೆಯುವ ಪ್ರಯತ್ನ ಮಾಡುತ್ತಾರೆ. ಬೆಲ್ಲದ್ ಅವರು, ನಿಮ್ಮ ಜಮೀರ್ ಅಹ್ಮದ್ಗೆ ಕೊಂಚ ಕನ್ನಡ ಕಲಿಸಿ ಅಂದಾಗ ಸಿದ್ದರಾಮಯ್ಯ, ನಿಂಗೇನೇ ಸರಿಯಾಗಿ ಕನ್ನಡ ಮಾತಾಡಲು ಬರಲ್ಲ, ಬೇರೆಯವರನ್ನು ಛೇಡಿಸುತ್ತೀಯಲ್ಲ ಅನ್ನುತ್ತಾ ಬೆಲ್ಲದ್ ಅವರ ತಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮಾಡಿದ ಕೆಲಸವನ್ನು ವಿವರಿಸುತ್ತಾರೆ.
For More Updates Join our WhatsApp Group :
