ನವದೆಹಲಿ : ಕಳೆದ ವರ್ಷ 5,600 ಕೋಟಿ ಲೋನ್ ಕೊಟ್ಟಿದ್ರು ಈ ವರ್ಷ ಕೇವಲ 2340 ಕೋಟಿ ಕೊಟ್ಟಿದ್ದಾರೆ. ಇದರಿಂದ 58% ಹಣ ಕಡಿಮೆಯಾಗಿದೆ. ರೈತರಿಗೆ ಇವರು ಪ್ರೀಯಾಗಿ ಕೊಡಲ್ಲ, ನಾವು ಕೊಡ್ತೇವೆ. ಇದರಿಂದ ರೈತರಿಗೆ ಅನ್ಯಾಯ ಮಾಡಿದಂತೆ, ರೈತರಿಗೆ ತೊಂದರೆಯಾಗ್ತದೆ. ಕರ್ನಾಟಕ ಬಡ್ಡಿ ರಹಿತವಾಗಿ ರೈತರಿಗೆ ಲೋನ್ ಕೊಡುತ್ತೆ. RBI & ನಬಾರ್ಡ್ ಬರುವುದು ಕೇಂದ್ರ ಸರ್ಕಾರದ ಅಧೀನದಲ್ಲಿ ಅವರು ಹಣ ಕೊಡಲು ಹೇಳಬಹುದಲ್ವಾ…? ಕಮರ್ಷಿಯಲ್ ಬ್ಯಾಂಕ್ ನಲ್ಲಿ ಲೋನ್ ತಗೊಳೋಕೆ ಆಗುತ್ತಾ..? ಎಂದು ನಬಾರ್ಡ್ ವಿಚಾರದಲ್ಲಿ ಕೇಂದ್ರ ಸಚಿವೆ ನಿರ್ಮಲ ಸೀತಾರಾಮ ನ್ ಭೇಟಿ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಬಿಜೆಪಿಯವರು ರೈತರ ಬಗ್ಗೆ ಮಾತನಾಡಿ ಅಂದ್ರೆ ಮಾತನಾಡಲ್ಲ. ಅಶೋಕ ಮಾತನಾಡಲ್ಲ, ಯಡಿಯೂರಪ್ಪ ಮಾತನಾಡಲ್ಲ. ಸಿಟಿ ರವಿ ಮಾತನಾಡಲ್ಲ, ಯತ್ನಾಳ್ ಮಾತನಾಡಲ್ಲ. ಕುಮಾರಸ್ವಾಮಿ ಮಾತನಾಡಲ್ಲ, ವಿಜಯೇಂದ್ರ ಮಾತನಾಡಲ್ಲ. ಕೇಂದ್ರ ಸರ್ಕಾರ ಈ ವರ್ಷ 2300 ಕೊಡ್ತಿವಿ ಅಂತಾ ಪತ್ರ ಬರೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.