ದಳಪತಿ ವಿಜಯ್ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ

ದಳಪತಿ ವಿಜಯ್ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ ನಟನ ಕೊನೆ ಚಿತ್ರ. ಅಲ್ಲದೇ, ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಹಿನ್ನೆಲೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚಿತ್ರಕ್ಕೀಗ ಕರುನಾಡಿನ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಎಂಟ್ರಿಯಾಗಿದೆ.

ಚಿತ್ರ ನಿರ್ಮಾಪಕರು ಇಂದು ತಮ್ಮ ತಂಡಕ್ಕೆ ಪೂಜಾ ಹೆಗ್ಡೆ ಅವರ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ ಚಿತ್ರದ ಹಿಂದಿರುವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ”ಕೆವಿಎನ್ ಪ್ರೊಡಕ್ಷನ್ಸ್” ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡುವ ಮೂಲಕ ಕರಾವಳಿ ಬೆಡಗಿಯ ಎಂಟ್ರಿ ಘೋಷಿಸಿದ್ದಾರೆ.

ಪೂಜಾ ಹೆಗ್ಡೆ ಅವರ ಆಕರ್ಷಕ ಫೋಟೋ ಒಳಗೊಂಡಿರುವ ಈ ಪೋಸ್ಟ್ನಲ್ಲಿ, ಬಹುಭಾಷಾ ನಟಿಯನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಗಿದೆ. ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿರುವುದರ ಮಾಹಿತಿ ಕೊಟ್ಟಿದೆ. “ಅದ್ಭುತ ಜೋಡಿಯನ್ನು ಮತ್ತೊಮ್ಮೆ ದೊಡ್ಡ ಪರದೆಗೆ ಹಿಂತಿರುಗಿಸುತ್ತಿದ್ದೇವೆ. ನಿಮಗೆ ಈಗಾಗಲೇ ತಿಳಿದಿದೆ ಎಂಬುದು ನಮಗೆ ತಿಳಿದಿದೆ, ಆದರೆ ಅಧಿಕೃತವಾಗಿ ಈಗ ಅನೌನ್ಸ್ ಮಾಡುತ್ತಿದ್ದೇವೆ. ವೆಲ್ಕಮ್ ಆನ್ಬೋರ್ಡ್ ಪೂಜಾ ಹೆಗ್ಡೆ” ಎಂದು ಬರೆದುಕೊಂಡಿದೆ.

Leave a Reply

Your email address will not be published. Required fields are marked *