ಆಂಧ್ರ ಪ್ರದೇಶ: ದೇವಾಲಯದಲ್ಲಿ ನಾಗರಹಾವು ಪ್ರತ್ಯಕ್ಷವಾದರೆ ಅದನ್ನು ಅನೇಕರು ದೈವಿಕ ಸಂಕೇತವೆಂದು ಭಾವಿಸುತ್ತಾರೆ. ಜನರು ಹಾವನ್ನು ನೋಡಲು ಮುಗಿಬೀಳುವುದಲ್ಲದೇ ಪೂಜೆ ಸಲ್ಲಿಸಿದ ಘಟನೆಗಳೂ ಈಗಾಗಲೇ ನಡೆದಿವೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದೆ. ಆಂಧ್ರಪ್ರದೇಶದ ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯ ಮನುಬೋಲು ಮಂಡಲದಲ್ಲಿರುವ ಚೆರ್ಲೋಪಲ್ಲಿ ವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಭಕ್ತರಿಗೆ ನಾಗರಹಾವು ದರ್ಶನ ಕೊಟ್ಟಿದೆ. ದೇವಾಲಯಕ್ಕೆ ಬಂದ ಭಕ್ತರು ನಾಗರಹಾವಿಗೆ ಪೂಜೆ ಸಲ್ಲಿಸಿದ್ದಾರೆ. ನಾಗರಹಾವು ಪ್ರತ್ಯಕ್ಷವಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನಾಗರಹಾವೊಂದು ಶಿವನ ದೇವಾಲಯದಲ್ಲಿ ಪ್ರತ್ಯಕ್ಷವಾಗಿರುವುದನ್ನು ಕಾಣಬಹುದು. ನಾಗರಹಾವನ್ನು ಕಂಡೊಡನೆ ಭಕ್ತರು ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕುತ್ತಿದ್ದಾರೆ.
ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದ ಸಮಯದಲ್ಲಿ ಶಿವಲಿಂಗದ ಪಕ್ಕದಲ್ಲೇ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಇದು ದೇವರ ಮಹಿಮೆಯ ಸಂಕೇತವಾಗಿದೆ ಎಂದು ದೇವಾಲಯದ ಅರ್ಚಕ ಶ್ರೀನಿವಾಸುಲು ವಿವರಿಸಿದ್ದಾರೆ.
For More Updates Join our WhatsApp Group :
