ಅಂಕಣ || ಕೃಷ್ಣಂ ವಂದೇ ಜಗದ್ಗುರುಂ

ಲೇಖನ : ಲಿಖಿತ್ ಹೊನ್ನಾಪುರ , ಮಾಗಡಿ ತಾ, ರಾಮನಗರ ಜಿಲ್ಲೆ

ವಸುದೇವಸುತಂ ದೇವಂ ಕಂಸ ಚಾಣೂರ ರ‍್ದನಂ

ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥

ನನಗಾಗಿ ಇರುವ ಅವನಿಗೆ, ಸಕಲ ಜೀವ ರಾಶಿಯ ಜಗದೊದ್ಧಾರನಿಗೆ, ಅವನ ಜನ್ಮ ದಿನದ ಶುಭಾಶಯಗಳು. ರಾಧೆಯ ಮನ ಕದ್ದು, ರುಕ್ಕಿಣಿಯ ಜೊತೆಗಿದ್ದು, ಬಾಮೆಯ ಪ್ರೀತಿ ಮಾಡುತ್ತ, ಬೇಡಿ ಬಂದವರ ಆಸೆ ನೆರೆವೆರಿಸುತ್ತ, ದ್ವಾರಕಾದೀಶನಾಗಿ ನನ್ನ ಮನದರಸನಾಗಿರು ಶ್ರೀಕೃಷ್ಣನಿಗೆ ವಂದನರ‍್ಪಣೆ.  ಕೃಷ್ಣ ??  ಅವನೇ ಒಂದು ಅದ್ಭುತ  ಅವನ ಬಗ್ಗೆ ಹೇಳೋದು ಕೇಳೋದು ಇನ್ನು ಅದ್ಭುತ . ಈ ರಾಧೇಯ ಮನಸ್ಸು ಕದ್ದವನವನು  ಮನದಲ್ಲೇ ಪ್ರೀತಿಯ ಸಾವಿರ ಅಲೆಗಳ ಎಬ್ಬಿಸಿದವನು , ಮರೆತೆನೆಂದರೂ, ಮರೆಯಲಾಗದ ಭಾವ ನೀನು. ತೊರೆದು ಜೀವಿಸಲಾರೆ ಎನ್ನುವ ಅದ್ಭುತ ಅನುಭಾವ ನೀನು. ನೀನ್ನೊಂದಿಗೆ ಸಾಗಿಸುವ ಈ ಜೀವನಕ್ಕೆ ಸಾರಥಿಯು ನೀನು. ನಿನ್ನ ಭಕ್ತಿಯಲ್ಲಿ ಸಾಗಿಸುವ ಈ ಜೀವನಕ್ಕೆ ಸುಕೃತ ಅನುಭೂತಿಯು ನೀನು. ಹೇಯ್ ಕೃಷ್ಣ ನೀನು ಪ್ರತಿಯೊಂದು ಜೀವಿಗೂ ಸ್ವಂತವಾಗಿರುವ ಭಗವಂತ.

ಆದರೇ, ನೀ ನನ್ನವನು ಎನ್ನುವ ಸ್ವರ‍್ಥ ನನ್ನಲ್ಲಿ ಎಂದು ಎಂದೆಂದಿಗೂ ಜೀವಂತ. ರಾಧೆಯ ಹೆಸರ ಕರೆದಾಗಲೊಮ್ಮೆ, ಮನದೊಳಗೆ ಬಂದು ಹೋಗುವ ಪ್ರೀತಿಯ ಅತಿಥಿ ನೀನು. ನಾನು ಕರೆದಿದ್ದು ರಾಧೆಯನ್ನೆ ಇರಬಹುದು, ಆದರೇ ರಾಧೆಯನ್ನು ಕರೆದಾಗ ನೀ ಬರುವೆ ಎಂಬ ಕಾರಣದಿಂದಲೇ, ನಿನ್ನ ಹೆಸರ ಕರೆಯದೆ, ರಾಧೆಯನ್ನು ಕೂಗುವೆ ನಾನು. ಹೇ ರಾಧಾ ಹೃದಯದ ನಿವಾಸಿ. ನಿನ್ನ ಮನಸನ್ನು ಮನಸಲ್ಲಿ ಅವಳೆ ಪ್ರೇಯಸಿ. ರುಕ್ಕಿಣಿಯ ಮನದಲ್ಲೂ ನೀ ವಾಸಿ, ಸತ್ಯಭಾಮೆಯೂ ಸಹ ಬಂದಳು ನಿನ್ನ ಅರಸಿ, ಮೀರಾ ಭಜನೆಯಲ್ಲೂ ನೀ ಆಗಿರುವೆ ರ‍್ವಕಾಲ ಪ್ರವಾಸಿ. ಮರೆತು ಬದುಕಬಲ್ಲೇ ಪ್ರಪಂಚವನ್ನು, ಬದುಕಾಲಾರೆ ತಪ್ಪಿಯು ಮರೆತು ನಿನ್ನ. ಮನಸಲ್ಲಿ ಭಾವಗಳು ನೂರೆಂಟಿದ್ದರೂ, ನಿನ್ನ ಜೊತೆಗಿನ ಭಕ್ತಿ ಭಾವದ ಮುಂದೆ ಬೇರೆಲ್ಲವೂ ಶೂನ್ಯ. ಎಲ್ಲೆಲ್ಲೂ ಹಾಗೂ ಎಲ್ಲರಲ್ಲೂ ನೀನೇ ಇರುವಾಗ, ನನಗೆ ಬೇಡದವರಲ್ಲಿ ನೀನಿಲ್ಲ ಅಂತ ಭಾವಿಸಿದರೆ, ಅದು ನಿನ್ನ ಬಗೆಗಿನ ಅಪನಂಬಿಕೆಯೇ ಆಗುವುದು ನೀ ನನ್ನೊಳಗಿನ ಹಿತವಾದ ಭಾವವಾಗಿರುವಾಗ, ನೀನೇ ಎಲ್ಲರೊಳಗೂ ಇರುವ ಸ್ಥಿತ ಭಾವ ಅಂತ ನಂಬಬೇಕು. ನಿನ್ನನನೊಮ್ಮೆ ಮನಸಾರೆ ನೆನೆದರೆ ಸಾಕು, ಸಕಲ ಜನ್ಮಗಳ ಪಾಪಗಳು ನಶಿಸಿ ಹೋಗುವವು. ನಿನ್ನನ್ನೊಮ್ಮೆ ಭಕ್ತಿಯಿಂದ ಪೂಜಿಸಿದರೆ ಸಾಕು, ಸಕಲ ದೋಷಗಳು ನಿವಾರಣೆಯಾಗುವವು. ಹೀಗಿರೋವಾಗ, ಮತ್ಯಾರ ನೆನೆಯುವ ಅವಶ್ಯಕತೆಯೂ ಇಲ್ಲ, ಇನ್ಯಾರನ್ನು ಪೂಜಿಸುವ ಅಗತ್ಯತೆಯೂ ಇಲ್ಲ. ರಾಧೆಯ ಪ್ರೀತಿಗೆ ಪರವಶನಾದರೂ, ರುಕ್ಕಿಣಿಯ ಕರೆಗೆ ಓಗೊಟ್ಟವನು ನೀನು. ಸತ್ಯಭಾಮೆಯ ಅಹಂಕಾರವನ್ನು ಸಹಿಸಿ, ಜಾಂಬವತಿಯನ್ನು ವರಿಸಿದವ ನೀನು. ಸುಧಾಮನ ಪ್ರೀತಿಯ ಸಖನಾದರೂ, ರ‍್ಜುನನ ಸ್ನೇಹಕ್ಕಾಗಿ ಸರಥಿಯಾದವ ನೀನು. ದೌಪದಿಯ ಮಾನವ ಕಾಯಲು ಅಕ್ಷಯ ವಸ್ತ್ರವ ಕೊಟ್ಟು, ಮೀರಾಳ ಭಕ್ತಿಗೂ ಒಲಿದವನು ನೀನು , ನನ್ನೊಳಗಿನ ನಿನ್ನ ಅರಿಯಬೇಕಾದರೆ, ಪ್ರಂಚವೂ ಮತ್ತೆ ಮತ್ತೆ ಅಳಿಯಬೇಕು, ಅಳಿದು ಕಿಂಚಿತ್ತು ಉಳಿಯಬೇಕು. ನೀ ನನ್ನೋಳಗಿನ ಮಾಯೆಯೋ, ಛಾಯೆಯೋ ಅದನ್ನರಿಯಲು, ಈ ಪ್ರಪಂಚವೇ ಸವೆದು, ಪಳಿಯುಳಿಕೆಯಾಗಿ, ಮರೆಯಾಗಬೇಕು. ನನ್ನೋಳಗೆ ನೀನೋ? ಅಥವಾ ನಿನ್ನ ನೆನಪೋಳಗೆ ನಾನೋ ನಾನರಿಯೇ. ಆದರೇ, ನನ್ನಂತರಂಗವನ್ನು ಒಮ್ಮೆ ಇಣುಕಿ ನೋಡು, ಅಲ್ಲಿ ಇರುವುದು, ನೀನಲ್ಲದೆ ಮತ್ತಾರೂ ಇಲ್ಲ. ಹೇಯ್ ಕೃಷ್ಣ ಸಂಪರ‍್ಣ ಸೃಷ್ಟಿಯ ಒಡೆಯನೆ ನೀನಾಗಿರುವಾಗ, ನಿನ್ನ ಭಕ್ತಿಯ ಸವಿಯನ್ನಲ್ಲದೆ ಬಯಸೆನೂ ಬೇರೆನು. ರ‍್ವವೂ ನೀನೇ, ರ‍್ವಸ್ವವೂ ನೀನೇ. ಮತ್ತೇನು ಬೇಡ ನಿನ್ನ ಹೊರತು. ಪ್ರೀತಿ ಎಂಬುದು ನಿಜವೇ ಸರಿ,

ಪ್ರೀತಿಗೆ ಸ್ಫರ‍್ತಿ ನೀನೇ ಸರಿ, ಪಡೆಯದ ಪ್ರೀತಿಯೂ ನಿನ್ನದಾದರೂ, ಒಂದೊಮ್ಮೆ ಪ್ರೀತಿಸಬೇಕು ಎಂದಾದದರೇ, ನಿನ್ನ ಪ್ರೀತಿಯ ಪರಿಯೇ ಸರಿ. ನೀನೇ ಬೇಕು ಈ ಹೃದಯಕ್ಕೆ. ನೀನಲ್ಲದೇ, ಯಾವ ಹಂಬಲವೂ ಇಲ್ಲ. ನೀನೊಬ್ಬನಿದ್ದರೇ ಸಾಕು ಈ ಜನ್ಮಕ್ಕೆ, ಮತ್ಯಾರ ಅವಶ್ಯಕತೆಯೂ ಇಲ್ಲ. ಚಂದ್ರನ ಸೊಬಗೂ ಸಹ ನಿನ್ನ ಮುಂದೆ ಶೂನ್ಯವೇ, ಸರ‍್ಯನ ಶಾಖವೂ ಸಹ ನಿನ್ನ ಮುಂದೆ ಶೂನ್ಯವೇ, ತಂಗಾಳಿಯ ತಂಪು ಸಹ ನಿನ್ನ ಮುಂದೆ ಶೂನ್ಯವೇ, ಪ್ರಕೃತಿಯ ಸೌಂರ‍್ಯವೂ ಸಹ ನಿನ್ನ ಮುಂದೆ ಶೂನ್ಯವೇ, ನೀನೊಬ್ಬನಿದ್ದರೇ ಸಾಕೆನಗೆ, ನೀನಿಲ್ಲದೆ ಈ ಪ್ರಪಂಚವೂ ಸಹ ಶೂನ್ಯವೇ. ನನ್ನೊಳಗೆ ನಾನೇ ಅಳಿದರೂ, ಅಳಿಯದೆ ಉಳಿಯುವ ಭಾವವೇ ನೀನು. ಒಂದೊಮ್ಮೆ ನನ್ನೇ ನಾನು ಮರೆತರೂ, ಕೊನೆಯಲ್ಲಿ ಶೇಷವಾಗಿ ಉಳಿಯುವ ಸಾರವೇ ನೀನು. ನೀನೇ ಸಂಪರ‍್ಣ ಎಂಬ ಭಾವವೂ ಮನಸಲ್ಲಿ ಮೂಡಿದಾಗ, ಸಮಗ್ರ ಬ್ರಹ್ಮಾಂಡವೇ ನೀನಿಲ್ಲದೆ ಸೊನ್ನೆ ಎಂಬ ಸತ್ಯವು ಅರಿವಾಯಿತು. ರ‍್ಥವಾಗದ ಅದೆಷ್ಟೋ ಪ್ರಶ್ನೆಗಳಿಗೆ, ನೀನೇ ಉತ್ತರವಾಗಿರುವೆ. ರ‍್ಥವಾಗದ ಬದುಕಿಗೂ, ಒಂದುತ್ತರ ನೀಡಯ್ಯ ಸಾಕೆನಗೆ. ಪ್ರತಿ ಕ್ಷಣದ ಬದುಕು ಸಹ ನೀ ಕೊಟ್ಟ ಬಿಕ್ಷೆ. ಆದರೂ, ನಾನು ನನ್ನದು ಅಂತ ಮಡುತ್ತಿರುವರು ಎಲ್ಲರೂ ಸಮೀಕ್ಷೆ. ನಿನ್ನ ನೋಡುತ್ತಿದ್ದರೆ ಸಾಕೆನಗೆ, ಸ್ರ‍್ಗದ ಸಿರಿಯೂ ಸಹ ಬೇಕಿಲ್ಲ. ನಿನ್ನ ಸನಿಹವೇ ಬೇಕೆನಗೆ, ಮತ್ಯಾವ ಐಶ್ರ‍್ಯವೂ ಸಹ ಬೇಕಿಲ್ಲ.ನೀನು ಸುಳ್ಳು ಎಂದು ನಿರೂಪಿಸುವ ಸ್ರ‍್ಧೆಯಲ್ಲಿ ಓಡಿದೆ ಪ್ರಪಂಚ. ನಿನ್ನನ್ನ ಸುಳ್ಳು ಎಂದು ನಿರೂಪಿಸುವ ಆಟದಲ್ಲಿ, ನಿನ್ನನ್ನು ಅರಿಯುವ ಸೌಭಾಗ್ಯ ಅವರದು.

ಕೃಷ್ಣನಿಲ್ಲದ ರಾಧೆ ರಾಧೇಯಿಲ್ಲದ ಕೃಷ್ಣ

ಕೃಷ್ಣ : ನಿನ್ನ ನನಯದಂಚಿನಿಂದ ಜಾರಿದ ಆ ಕಣ್ಣಸನ್ನೆಗೆ, ಸಂದೇಶವೊಂದು ರೂಪುಗೊಂಡು ನನ್ನ ನಯನಗಳಿಗೆ ಕನಸಾಗಿತ್ತು ಆ ಕನಸುಗಳೆಲ್ಲವು ನಿನ್ನಯ ಪ್ರೀತಿಯ ಕರೆಯೋಲೆಯಾಗಿತ್ತು.

ರಾಧೆ : ನಿನ್ನ ನೋಡಿ ನಾಚುವ ಪ್ರತಿದಿನವೂ ನನಗೆ ನಿನ್ನ ಶೃಂಗಾರವೆಲ್ಲವು ನನ್ನ ಒಡವೆಯಾಗಿತ್ತು.. ನನ್ನಿಂದ ಪಡೆದ ಒಡವೆಯ ಉಡುಗೊರೆಯೇ ನಿನ್ನ ಕೊಳಲ ದನಿಯ ನಾದವಾಗಿತ್ತು..

ಕೃಷ್ಣ :  ರಾಧೆ ನಿನ್ನ ಅಂತರಂಗದ ರ‍್ಭದಲ್ಲಿ ನನ್ನಯ ಪ್ರೀತಿಗೆ ಪೂಜೆ ಪುನಸ್ಕಾರಗಳು ಅದೆಷ್ಟೋ ನಡೆದು ಹೋದವು .. ನನಗೆಂದೇ ತಯಾರಿಸುವ ನೈವೇದ್ಯವೇ ನಿನ್ನಯ ಪ್ರೀತಿಯ ಸಿಹಿಯು ಎನಗೆ..

ರಾಧೆ : ಹೇ ಕೃಷ್ಣ ನಿನ್ನ ಒಲವು ನನಗಾಗಿ ಉದ್ಭವಿಸುವಾಗ

ನಿನ್ನ ನಾಡಿ ತರಂಗಗಳು ನನ್ನೊಲವನ್ನೇ ಬಯಸುವುದು.. ಎನ್ನ ರಾಧೆಗೆ ಈ ಎದೆಯ ಒಲವ ರಾಗ ಸುಧೆಯ ಗಾನವು ನಿನಗಾಗಿಯೇ ಎಂದು ಹೊಮ್ಮಿಸುವೆಯಲ್ಲ ಶ್ರೀ ಕೃಷ್ಣ .. ಈ ರಾಧೆಯ ಮನವಿ ಮನವು ನಿನಗಾಗೆ.

ಕೃಷ್ಣ : ಸರ‍್ಯ ಉದಯಿಸುವ ಪರಿಯ ಅರಿತವಳೊ ಇಲ್ಲವೋ ಆದರೆ ಈ ಕೃಷ್ಣನ ಹೆಜ್ಜೆ ಸಪ್ಪಳ ಅರಿತವಳು ನೀನು ನನ್ನ ದಾರಿಗೆ ಹೂವಾಗಿ ನಲುಗುವೆಯಲ್ಲ ನನ್ನ ಪಾದದ ಅಡಿಗೆ ಮೃದುವಾಗಿ ಹತ್ತಿಯಂತೆ ಕರಗುವೆಯಲ್ಲ .

ರಾಧೆ : ಹನಿ ಹನಿ ಸೇರುವಾಗ ಹಳ್ಳ ಎಂದಾದರೆ.. ಈ ರಾಧೆಯ ಸಣ್ಣ ಸಣ್ಣ ಆಸೆಯ ಕನಸುಗಳು ಸೇರಿ ನೀನೇ ಶ್ರೀ ಕೃಷ್ಣ  ಎಲ್ಲವನ್ನು ಬಲ್ಲವನು ನೀನು ಆದರೆ ಸಮಯ ಎನ್ನುವುದು ನಿನ್ನನು ಬಿಡಲಿಲ್ಲ ಆದರೆ ನೀ ಎಂದಿಗೂ ಈ ರಾಧೇಯನ್ನು ಹಿಂಬಾಲಿಸುವುದನ್ನು ಮರೆಯಲಿಲ್ಲ. ಆಸೆಯ ಹೊತ್ತ ಈ ರಾಧೆ ನಿನ್ನ ಧ್ಯಾನದಲ್ಲಿ ಮಗ್ನಳಾದಳು. ನಿನ್ನದೆಯ ಮಹಲಿಗೆ ರಾಣಿಯಾಗಲು ಬಯಸಲಿಲ್ಲ ನಿನ್ನ ತನುಮನದೆದೆಗೆ ಪ್ರೀತಿ ರಾಗವಾಗಲು ಹಾತೊರೆದವಳು. ನಿನ್ನ ಧ್ಯಾನದಲ್ಲೇ ವೈಭೋಗ ಕಂಡವಳು. ನಿನ್ನ ಸಿರಿಯಲ್ಲೇ ಸಂತಸ ಪಟ್ಟವಳು. ನನ್ನೆಲ್ಲ ಕನಸಿಗು ಒಬ್ಬ ಒಡೆಯ ಬೇಕೆಂದವಳು.. ಕದ್ದು ಮುಚ್ಚಿ ನೋಡಿ ನಿನ್ನ ನನ್ನಲ್ಲಿನ ಖುಷಿ ನೋವನು ಹೊರ ಚೆಲ್ಲಿದವಳು ನೀನೇ ನನ್ನ ಒಡೆಯನೆಂದು ನಾಮಕರಣ ಮಾಡಿದವಳು. ನನಗೇನು ನಿನ್ನ ಉಡುಗೊರೇ ಕೃಷ್ಣ….?????

ರಾಧೆಗೆ ಕೃಷ್ಣನ ಸಂದೇಶ

ಯಾವ ಜನ್ಮದ ಭಂದವೋ ನನಗೂ ನಿನಗೂ ಅದ್ಯಾವ ರಾಶಿಯ ಮೇಷದಲ್ಲಿ ಜನಿಸಿರುವೆ ನಿನ್ನ ಧ್ಯಾನದಲ್ಲೇ ಮುಳುಗಿರುವೆ ಕಣ್ಣುಂಬ ನೀ ಕನಸಾಗಿ ತುಂಬಿದಷ್ಟು ಅದೆಷ್ಟು ಕಾಡುವೆ ಸಖಿ, ಮೋಹದ ಮೋಹನನಿಗೂ ನಿನ್ನ ವಿರಹದ ಬಿಸಿ ತಾಗಿತಲ್ಲ .. ಅದೆಷ್ಟು ಮೌನದ ಬೇಗುದಿ ಎದೆಯೊಳಗಿದೆ ಮನದ ತಳಮಳದ ಆದಿಗೆ ಬಾ ಸಖಿ, ಒಮ್ಮೆಲೆ ವಿಹರಿಸೋಣ, ಯಾವ ಮೋಹದ ತೀರದಲ್ಲಿ, ತಣಿಸದ ದಾಹದಲ್ಲಿ ! ಒಮ್ಮೆಲೆ ಎಲ್ಲವ ತಣಿಸುವ, ಮೋಹದ ಬಲೆಯಲಿ… ಬಾ ಸಖಿ, ಬಾ ಬಾರೆ ಸಖಿ ಭವವ ಕಳೆವ ತಾಣಕೆ, ಬೃಂದಾವನಕೆ ಶ್ಯಾಮನೋಡನೆ ಮೋಹಕ ಸಂಚಾರಕೆ !

ಹೇ ರಾಧೆ ನಿನ್ನೊಂದಿಗೆ ಸಾಗಿದ ಪಯಣದ ಹೆಜ್ಜೆಗಳಿಗೆ ದೂರವೆನಿಸಲಿಲ್ಲ ಸುಡುವ ಬಿಸಿಲಿದ್ದರು ನಿನ್ನೊಂದಿಗಿನ ಕ್ಷಣಗಳು ಬಿಸಿ ಎನಿಸಲಿಲ್ಲ.. ಹಾಯಾಗಿ ಅಲೆದಾಡುವ ಮುಗ್ಧ ನಾ ನಿನ್ನಾಸರೆಯ ಹಸ್ತ ನನಗೆ ನೀಡಿದೇ ಕ್ಷಣ ಕ್ಷಣವೂ ಬದಲಾಗುವ ನನ್ನ ಯೋಚನೆಗಳಿಗೆ ನಿನ್ನ ಅಲೋಚನೆಗಳಷ್ಟೇ ಶುರುವಾಗಿವೆ ಯೋಚಿಸಿ, ನಿಧಾನಿಸಿ,ನೀ ಹತ್ತಿರ ಬರುವಾಗ ಹೆಜ್ಜೆ ಸಪ್ಪಳದ ಗೆಜ್ಜೆನಾದ ನಿನ್ನ ಸುತ್ತುವರಿವಂತೆ ಮಾಡಿದೆ ನೂರಾರು ಸಲ ಕನಸಲ್ಲಿ ದಾಳಿ ಮಾಡಿ ಮತ್ತೊಮ್ಮೆ ಅದೇ ಕನಸಿನ ರಾಯಭಾರಿಯಾಗಿ ಲಗ್ಗೇ ಇಟ್ಟು ಹೃದಯಕ್ಕೆ ನಿನ್ನೊಂದಿಗಿನ ಕನಸೊಂದನ್ನು ಕದ್ದು ಹೋದೆ. ಎಷ್ಟೋ ದಿನಗಳು ಎಷ್ಟೋ ಸಲ ನೀ ನಗುವ ಆ ಗುಳಿಕೆನ್ನೆಯ ಚೆಂದವ ನೋಡಲು ದಿನವೆಲ್ಲ ಕಾಯುವೆ ನೀ ಬರುವ ದಾರಿಯ. ನಯವಾಗಿ ಅಲೆಅಲೆಯಾಗಿ ನಿನ್ನ ಕಾಡುವ ಕಾತರಕೆ ಇಳಿಸಂಜೆಯಲಿ ರೆಂಗೇರಿದ ಆ ಕೆಂಪು ಸರ‍್ಯ ನಿನ್ನ ಅಂದಕ್ಕೆ ಆರತಿ ತೆಗೆದು ಜಾರಲೆಂದು ಕಾದಿರುವ. ಮೋಡದಂಚಿನ ಬೆಳ್ಳಿ ಪರದೆ ಸರಿಯುವ ಮುನ್ನ ಪ್ರತಿದಿನವೂ ನೀ ನೀಡಬೇಕು ನನಗೆ ರ‍್ಶನ. ಆಶ್ರ‍್ಯವೇನಿಲ್ಲ ನೀನೊಂದು ನಿಜವಾಗಿಯೂ ಒಂದು ಅದ್ಭುತ! ತಾವರೆ ಹೂ ಕೇಸರಲ್ಲೇ ಹುಟ್ಟಿತೇ ಆದರೂ ಅದು ನೋಡಲಿಕ್ಕೆ ಸುಂದರವಾಗಿ ಕಂಗೊಳಿಸುತ್ತೆ ಕಾರಣ ಅವಳನ್ನ ನೋಡಲು ದಿನ ಒಬ್ಬ ಚಿನ್ನದಂತೆ ಕಿರಣಗಳ ಸೋಸಿ ತಪ್ಪದೆ ಬರುತ್ತಾನೆ ಸರ‍್ಯ ! ಹಾಗೆ ನೀನು ನೋವಲ್ಲೆ ಹುಟ್ಟು ನೋವಲ್ಲೇ ಬೆಳೆದು ನಿನ್ನ ನೋವೇಲ್ಲವನ್ನು ಹೇಳಿಕೊಳ್ಳುವಾಗಲೇ ನೀ ನನಗೆ ಸುಂದರವಾಗಿ ಕಂಗೊಳಿಸೋದು! ನಿನ್ನ ಸುಂದರವಾಗಿಯೇ ಇಷ್ಟಪಟ್ಟೇ ನೀನು ಸೊಗಸಾಗಿಯೇ ಆಸೆ ಪಟ್ಟೆ ಆದರೆ ನೀ ಬಯಸಿದಂತೆ ನಿನ್ನವನಾಗಲಿಲ್ಲ ರಾಧೆ ಸಾಕು ರಾಧೆ ಈ ನೋವುಗಳು ನಿನಗೂ ನಿನ್ನದೇ ಅದ ಆಸೆ ಆಕಾಂಕ್ಷೆಗಳಿವೆ ಸುಂದರ ಬದುಕಿದೆ ಮುಗಿಯದ ಪಯಣವದು ನಿನ್ನೆಲ್ಲತನವನ್ನು ಉಳಿಸಿ ಸುಖಿಯಾಗಿರು ಅದೇ ನನ್ನಾಸೆ ರಾಧೆ . ರಾಧೆ ರಾಧೆ

Leave a Reply

Your email address will not be published. Required fields are marked *