ಮಧ್ಯಪ್ರಿಯರಿಗೆ ಖುಷಿಯ ವಿಚಾರ : ಮದ್ಯದ ದರ ಇಳಿಸಿದ ಸರ್ಕಾರ

ಬೆಂಗಳೂರು: ಪ್ರೀಮಿಯಂ ಮದ್ಯದ ಬೆಲೆ ಇಂದಿನಿಂದ ಅಗ್ಗವಾಗಲಿದೆ. ದುಬಾರಿ ಬ್ರಾಂಡ್​​ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಜೆಟ್​ನಲ್ಲಿ ಘೋಷಿಸಿದಂತೆ ಜುಲೈ 1ರಿಂದ ರಾಜ್ಯದಲ್ಲಿ ಮದ್ಯದ ದರ ಇಳಿಕೆಯಾಗಬೇಕಿತ್ತು. ಜುಲೈನಿಂದ ಮದ್ಯದ ದರದಲ್ಲಿ ಪರಿಷ್ಕರಣೆ ಮಾಡುವ ಮೂಲಕ ಒಂದೆಡೆ ಮದ್ಯ ಪ್ರಿಯರಿಗೆ ಖುಷಿ ಪಡಿಸುವುದಷ್ಟೇ ಅಲ್ಲ ತನ್ನ ಅಬಕಾರಿ ಆದಾಯವನ್ನೂ ಹೆಚ್ಚಿಸುವ ಲೆಕ್ಕಾಚಾರ ರಾಜ್ಯ ಸರ್ಕಾರದ್ದಾಗಿತ್ತು.‌ ಈ ಸಂಬಂಧ ಜುಲೈ 1ಕ್ಕೆ ಪರಿಷ್ಕೃತ ದರಗಳ ಅಧಿಸೂಚನೆ ಹೊರಡಿಸಿತ್ತು. ಆದರೆ, ಸಿಎಂ ಸೂಚನೆ ಮೇರೆಗೆ ದರ ಪರಿಷ್ಕರಣೆ ಆದೇಶ ಜಾರಿಯನ್ನು ತಡೆ ಹಿಡಿಯಲಾಗಿತ್ತು. ಇದೀಗ ಮತ್ತೆ ಕೆಲ ಪರಿಷ್ಕರಣೆ ಮಾಡಿ ದುಬಾರಿ ಬ್ರಾಂಡ್​ಗಳ ಮದ್ಯದ ಮೇಲಿನ ದರವನ್ನು 15-20% ವರೆಗೆ ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಪರಿಷ್ಕೃತ ದರದಂತೆ ಮದ್ಯದ ಸ್ಲ್ಯಾಬ್ ವಾರು ದರವನ್ನು ಪರಿಷ್ಕರಿಸಿರುವ ಸರ್ಕಾರ ಪ್ರಸ್ತುತ ಇದ್ದ 18 ಸ್ಲ್ಯಾಬ್​ಗಳಲ್ಲಿ ವಿಧಿಸಲಾಗುತ್ತಿದ್ದ ಅಬಕಾರಿ ಸುಂಕವನ್ನು 16 ಸ್ಲ್ಯಾಬ್​ಗಳಿಗೆ ಇಳಿಕೆ ಮಾಡಿದೆ. ಅದಕ್ಕನುಗಣವಾಗಿ ಅಬಕಾರಿ ಸುಂಕವನ್ನು ಪರಿಷ್ಕರಿಸಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಪರಿಷ್ಕೃತ ದರ ಹೇಗಿರಲಿದೆ?: ಅಬಕಾರಿ ಇಲಾಖೆ ಪ್ರತಿ ಬಾಕ್ಸ್ (8.64/9/12 ಬಲ್ಕ್ ಲೀಟರ್ ಮದ್ಯದ ಬಾಕ್ಸ್)ನ ಘೋಷಿತ ಉತ್ಪಾದನಾ ಬೆಲೆಯ ಆಧಾರದಲ್ಲಿ ಸ್ಲ್ಯಾಬ್ ವೈಸ್ ಅಬಕಾರಿ ಸುಂಕ ವಿಧಿಸುತ್ತದೆ. ಪ್ರಸ್ತುತ ಅಬಕಾರಿ ಸುಂಕವನ್ನು 18 ಸ್ಲ್ಯಾಬ್​ಗಳಲ್ಲಿ ವಿಧಿಸಲಾಗುತ್ತಿತ್ತು. ಇದೀಗ ಪರಿಷ್ಕೃತ ಅಬಕಾರಿ ಸುಂಕದಲ್ಲಿ ಪ್ರಸ್ತುತ ಇರುವ 18 ಸ್ಲ್ಯಾಬ್​ಗಳನ್ನು 16ಕ್ಕೆ ಕಡಿತಗೊಳಿಸಲಾಗಿದೆ. ಹಳೆಯ ಸ್ಲ್ಯಾಬ್​ಗೆ ಹೋಲಿಸಿದರೆ 5ನೇ ಸ್ಲ್ಯಾಬ್​ನಿಂದ 16 ಸ್ಲ್ಯಾಬ್ ವರೆಗಿನ‌ ಮದ್ಯದ ದರದಲ್ಲಿ ಇಳಿಕೆ ಮಾಡಲಾಗಿದೆ.

ಪರಿಷ್ಕೃತ 16 ಸ್ಲ್ಯಾಬ್ ವೈಸ್ ಘೋಷಿತ ಉತ್ಪಾದನಾ ಬೆಲೆಯ ಪ್ರಕಾರ 0-450 ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 215 ರೂ. ಇರಲಿದೆ. 451-500 ದರ ಸ್ಲ್ಯಾಬ್​ಗೆ ಸುಂಕ 294 ರೂ. ಪರಿಷ್ಕರಣೆ ಆಗಲಿದೆ. ಇನ್ನು 501-550 ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 386 ರೂ., 551-650 ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಸುಂಕ 523 ರೂ., 651-750 ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 620 ರೂ., 751-900 ದರ ಸ್ಲ್ಯಾಬ್​ಗೆ ಸುಂಕ 770 ರೂ., 901-1050 ದರ ಸ್ಲ್ಯಾಬ್​ಗೆ ಸುಂಕ 870 ರೂ., 1051-1300 ದರ ಸ್ಲ್ಯಾಬ್​ಗೆ ಸುಂಕ 970 ರೂ., 1301-1800 ದರ ಸ್ಲ್ಯಾಬ್​ಗೆ ಸುಂಕ 1200 ರೂ., 1801-2500 ದರ ಸ್ಲ್ಯಾಬ್​ಗೆ ಸುಂಕ 1400 ರೂ., 2501-5000 ದರ ಸ್ಲ್ಯಾಬ್​ಗೆ ಸುಂಕ 1600 ರೂ., 5001-8000 ದರ ಸ್ಲ್ಯಾಬ್​ಗೆ ಸುಂಕ 2000 ರೂ., 8001-12,500 ದರ ಸ್ಲ್ಯಾಬ್​ಗೆ ಸುಂಕ 2400 ರೂ., 12501-15000 ದರ ಸ್ಲ್ಯಾಬ್​ಗೆ ಸುಂಕ 2600 ರೂ., 15001-20000 ದರ ಸ್ಲ್ಯಾಬ್​ಗೆ ಸುಂಕ 2800 ರೂ. ಮತ್ತು 20000 ಮೇಲ್ಪಟ್ಟ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 3000 ರೂ. ವಿಧಿಸಲಾಗುತ್ತದೆ.

ಈವರೆಗಿನ ಮದ್ಯದ ದರ ಹೇಗಿತ್ತು?: ಈ ಮುಂಚೆ 18 ಸ್ಲ್ಯಾಬ್ ವೈಸ್ ಘೋಷಿತ ಉತ್ಪಾದನಾ ಬೆಲೆ (ಪ್ರತಿ ಬಾಕ್ಸ್) ಪ್ರಕಾರ 0-449ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 215 ರೂ. ವಿಧಿಸಲಾಗುತ್ತಿತ್ತು. 451- 499 ರೂ. ವರೆಗಿನ ಘೋಷಿತ ಉತ್ದಾದನಾ ದರದ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 294 ರೂ. ಇತ್ತು. ಇನ್ನು 500- 549 ದರ ಸ್ಲ್ಯಾಬ್​ಗೆ ಸುಂಕ 386 ರೂ., 550- 599 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 497 ರೂ., 600-699 ದರ ಸ್ಲ್ಯಾಬ್​ಗೆ ಸುಂಕ 668 ರೂ., 700-799 ದರ ಸ್ಲ್ಯಾಬ್​ಗೆ ಸುಂಕ 816 ರೂ., 800-899 ದರ ಸ್ಲ್ಯಾಬ್​ಗೆ ಸುಂಕ 870 ರೂ., 900-999 ದರ ಸ್ಲ್ಯಾಬ್​ಗೆ ಸುಂಕ 938 ರೂ., 1000-1099 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 982 ರೂ., 1100-1199 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1102 ರೂ., 1200-1299 ದರ ಸ್ಲ್ಯಾಬ್​ಗೆ ಸುಂಕ 1325 ರೂ., 1300-1399 ದರ ಸ್ಲ್ಯಾಬ್​ಗೆ ಸುಂಕ 1541ರೂ., 1400-1799 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1667 ರೂ., 1800-2199 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 1860 ರೂ., 2200-4924 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 2124 ರೂ., 4925-7650 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 2483 ರೂ., 7651-15000 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 3571 ರೂ., 15,001 ಮೇಲ್ಪಟ್ಟ ಘೋಷಿತ ಉತ್ಪಾದನಾ ದರ ಸ್ಲ್ಯಾಬ್​ಗೆ ಹೆಚ್ಚುವರಿ ಅಬಕಾರಿ ಸುಂಕ 5358 ರೂ. ವಿಧಿಸಲಾಗುತ್ತಿತ್ತು.

Leave a Reply

Your email address will not be published. Required fields are marked *