ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ವಿದೇಶಿ ಹಣ ಬಳಕೆ ಆರೋಪ: EDಗೆ ದೂರು

ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ವಿದೇಶಿ ಹಣ ಬಳಕೆ ಆರೋಪ: ಇಡಿಗೆ ದೂರು

ಬೆಂಗಳೂರು: ನಮ್ಮ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಹಾನಿ ಮಾಡುತ್ತಿರುವ ಯೂಟ್ಯೂಬರ್ಗಳು ಸಾಮಾಜಿಕ ಮಾಧ್ಯಮ ಇನ್ಫ್ಲೂಯೆನ್ಸ್ರ್ಗಳು ವಿದೇಶದಿಂದ ಹಣದ ನೆರವು ಪಡೆಯುತ್ತಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಬಂಜರಂಗದಳ ಮುಖಂಡ ತೇಜಸ್ ಎ ಗೌಡ ಪತ್ರ ಬರೆದಿದ್ದಾರೆ.

ವಿದೇಶದಿಂದ ಬಂದ ಹಣವನ್ನು ಉಪಯೋಗಿಸಿಕೊಂಡು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುಬೇಕು. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧ ಅಪಪ್ರಚಾರ ಮಾಡಲು ಓರ್ವ ಮುಸ್ಲಿಂ ಯ್ಯೂಟುಬರ್ ವಿದೇಶದಿಂದ ಹಣ ಪಡೆಯುತ್ತಿದ್ದಾನೆ. ಈತನ ಹಣದ ಮೂಲವನ್ನು ಪತ್ತೆಹಚ್ಚಿ, ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ದೂರಿನಲ್ಲಿ ಏನಿದೆ?

ಧರ್ಮಸ್ಥಳ ಮಂಜುನಾಥ ಸ್ವಾಮಿ ಮಂದಿರದ ಹೆಸರು ಕೆಡಿಸಲು ಪ್ರಯತ್ನಿಸುತ್ತಿರುವ ಮುಸ್ಲಿಂ ಯೂಟ್ಯೂಬರ್ ಮತ್ತು ಅವರ ಸಹಚರರು ವಿದೇಶಿದಿಂದ ಹಣ ಪಡೆದಿದ್ದಾರೆ ಎಂದು ಮಾಧ್ಯಮಗಳು, ಸಾಮಾಜಿಕ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ದರಿಂದ ಈ ದೂರುಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ಮಂದಿರವನ್ನು ವಿರೋಧಿಸುವವರು ಸ್ವೀಕರಿಸಿದ ವಿದೇಶಿ ಹಣಕಾಸು ವಹಿವಾಟಿನ ಬಗ್ಗೆ ವಿಚಾರಣೆ ನಡೆಸಬೇಕೆಂದು” ವಿನಂತಿಸಿಕೊಂಡಿದ್ದಾರೆ.

ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರ ಹಿಂದೆ ದೊಡ್ಡ ಗುಂಪಿದೆ. ಅವರ ಕೈವಾಡದಿಂದ ಅಪಪ್ರಚಾರ ಸೇರಿದಂತೆ ಎಲ್ಲವೂ ನಡೆಯುತ್ತಿದೆ. ಎನ್ಐಎ, ಇಡಿ ಅಧಿಕಾರಿಗಳು ತನಿಖೆ ಮಾಡಬೇಕು ಎಂದು ದೂರು ನೀಡಿದ್ದಾರೆ.

ಧರ್ಮಸ್ಥಳದ ಬಗ್ಗೆ ಎಡಪಂಥೀಯ ಶಕ್ತಿಗಳಿಂದ ಅಪಪ್ರಚಾರ: ರೆಡ್ಡಿ ಆರೋಪ

ಧರ್ಮಸ್ಥಳದ ಬಗ್ಗೆ ದುಷ್ಟ ಎಡಪಂಥೀಯ ಶಕ್ತಿಗಳಿಂದ ಅಪಪ್ರಚಾರವಾಗುತ್ತಿದೆ. ಎಡಪಂಥೀಯ ಮನೋಭಾವನೆವುಳ್ಳ ದುಷ್ಟ ಶಕ್ತಿಗಳೆಲ್ಲ ಸೇರಿಕೊಂಡಿವೆ. ಈ ಹುನ್ನಾರ ಇಲ್ಲಿಗೆ ಕೊನೆಗಾಣಿಸಬೇಕು. ಮುಸುಕುಧಾರಿ 13 ಸ್ಥಳಗಳಲ್ಲಿ ಹೆಣಗಳನ್ನು ಹೂತಿಟ್ಟಿದ್ದ ಎಂಬುವುದು ಬೋಗಸ್ ಆಯ್ತು. ಹಿಂದೂ ಪುಣ್ಯಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಹುನ್ನಾರ ನಡೆದಿದೆ. ಸೆಂಥಿಲ್ ಕಾಂಗ್ರೆಸ್ ಹೈಕಮಾಂಡ್ಗೆ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪ ಮಾಡಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *